‘ಅಯಾನ್’ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಶುಭಾರಂಭ
ಮಂಗಳೂರು, ಫೆ.5: ನಗರದ ಫಳ್ನೀರ್ ರಸ್ತೆಯ ಪೈಲ್ಯಾಂಡ್ ಪ್ಲಾಝಾದ ಪ್ರಥಮ ಮಹಡಿಯಲ್ಲಿರುವ ‘ಅಯಾನ್’ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ರವಿವಾರ ಶುಭಾರಂಭಗೊಂಡಿತು.
ಭಾರತೀಯ ಕೃಷಿಕ ಸಮಾಜದ ದ.ಕ.ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಕಾರ್ಪೊರೇಟ್ ಅಬ್ದುರ್ರವೂಫ್, ಅಕ್ಬರ್ ಟ್ರಾವೆಲ್ಸ್ ಆಫ್ ಇಂಡಿಯಾದ ಮ್ಯಾನೇಜರ್ ಎಲ್ವಿಸ್ ರೋಲ್ಸ್ ‘ಅಯಾನ್’ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ್ನು ಉದ್ಘಾಟಿಸಿದರು.
ಹೈದರ್ ಪರ್ತಿಪ್ಪಾಡಿ ಮಾತನಾಡಿ, ಸಂಸ್ಥೆಯು ಉತ್ತಮ ಸೇವೆಯನ್ನು ನೀಡಿ ಜನರ ವಿಶ್ವಾಸ ಗಳಿಸಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಬೆಳೆಯುತ್ತಿರುವ ಮಂಗಳೂರಿಗೆ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಯ ಅಗತ್ಯವಿದೆ. ಇದರಿಂದ ಪ್ರವಾಸೋದ್ಯಮ ಮತ್ತಷ್ಟು ಬೆಳೆಯಲಿದೆ ಎಂದು ಅಬ್ದುರ್ರವೂಫ್ ನುಡಿದರು.
ಗ್ರಾಹಕರ ಅಗತ್ಯತೆಗಳನ್ನು ಮನಗಂಡು ಸಕಾಲಕ್ಕೆ ಸ್ಪಂದಿಸಿದರೆ ಸಂಸ್ಥೆಯು ಹೆಚ್ಚು ಜನಸ್ನೇಹಿಯಾಗಲು ಸಾಧ್ಯವಿದೆ ಎಂದು ಎಲ್ವಿಸ್ ರೋಲ್ಸ್ ಅಭಿಪ್ರಾಯಪಟ್ಟರು.
ಈ ಸಂದರ್ಭ ರಿಯಾಝ್ ಬಂಟ್ವಾಳ, ಹಂಝ ಮಿತ್ತೂರು, ಮುಹಮ್ಮದ್ ಮೇದರಬೆಟ್ಟು, ಇಕ್ಬಾಲ್ ಸಾಮಣಿಗೆ ಉಪಸ್ಥಿತರಿದ್ದರು.
‘ಅಯಾನ್’ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನಲ್ಲಿ ಹಜ್ ಮತ್ತು ಉಮ್ರಾ ಯಾತ್ರಾ ಸೇವೆ, ಬಸ್, ರೈಲು, ವಿಮಾನ ಟಿಕೆಟ್, ವೀಸಾ, ಅಟೆಸ್ಟೇಷನ್, ರಜಾದಿನಗಳ ಪ್ರವಾಸ ಯೋಜನೆ ಇತ್ಯಾದಿ ವ್ಯವಸ್ಥೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಅಬ್ದುಲ್ ಖಾದರ್ ಸಾಮಣಿಗೆ ತಿಳಿಸಿದ್ದಾರೆ.