×
Ad

‘ಸ್ವಚ್ಚ ಮಂಗಳೂರು’ ಅಭಿಯಾನದ ಅಂಗವಾಗಿ ಗೋಡೆಯಲ್ಲಿ ಚಿತ್ತಾರ

Update: 2017-02-05 18:44 IST

ಮಂಗಳೂರು, ಫೆ.5: ನಗರದ ರಾಮಕೃಷ್ಣ ಮಿಷನ್ ಸಂಸ್ಥೆಯು ಸ್ವಚ್ಛ ಮಂಗಳೂರು ಅಭಿಯಾನದ ಅಂಗವಾಗಿ ರವಿವಾರ ವಿಶೇಷ ಕಾರ್ಯಕ್ರಮ ನಡೆಸಿ ಗಮನ ಸೆಳೆದಿದೆ.

200 ಅಭಿಯಾನಗಳನ್ನು ಯಶಸ್ವಿಯಾಗಿ ಪೂರೈಸಿದ ನೆನಪಿಗಾಗಿ ಹಂಪಣಕಟ್ಟೆ ಸಿಗ್ನಲ್‌ನಿಂದ ಕ್ಲಾಕ್ ಟವರ್‌ವರೆಗಿನ ವೆನ್ಲಾಕ್ ಆಸ್ಪತ್ರೆಯ ಆವರಣ ಗೋಡೆಗೆ (ಸುಮಾರು 1 ಸಾವಿರ ಅಡಿ ಉದ್ದ) ಬಣ್ಣದ ಪೇಂಟಿಂಗ್ ಮಾಡಿ ನಗರದ ಅಂದವನ್ನು ಹೆಚ್ಚಿಸುವ ಪ್ರಯತ್ನ ಮಾಡಿದೆ.

ಆದಿತತ್ವ ಆರ್ಟ್ಸ್ ಸಹಯೋಗದಲ್ಲಿ ಕಲಾವಿದರಾದ ವಿಕ್ರಮ ಶೆಟ್ಟಿ ಹಾಗೂ ಶೈಲೇಶ್ ಕೋಟ್ಯಾನ್, ಮಹಾಲಸಾ ಆರ್ಟ್ಸ್ ಸ್ಕೂಲ್‌ನ 25 ಸಹ ಕಲಾವಿದರೊಂದಿಗೆ ಗೋಡೆಗಳನ್ನು ಸ್ವಚ್ಛಗೊಳಿಸಿ, ಸುಂದರ ಚಿತ್ರ ಬರೆದು ಅಂದಗೊಳಿಸಿದರು.

ಕರಾವಳಿಯ ಸಂಸ್ಕೃತಿ, ಶಿಕ್ಷಣ, ಪರಿಸರ, ಸ್ವಚ್ಚತೆ, ಅರೋಗ್ಯ ಮತ್ತಿತರ ವಿಷಯಗಳನ್ನು ಆಧರಿಸಿ ಕ್ರಿಯಾತ್ಮಕವಾಗಿ ಚಿತ್ರಗಳನ್ನು ಬಿಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News