×
Ad

ಫೆ.7-11: ಬೊಳ್ಳೂರು ಮಸೀದಿಯ 34ನೇ ವಾರ್ಷಿಕೋತ್ಸವ

Update: 2017-02-05 18:52 IST

ಮೂಲ್ಕಿ,ಫೆ.5:ಹಳೆಯಂಗಡಿ ಬೊಳ್ಳೂರಿನ ಮುಹಿಯ್ಯದ್ದೀನ್ ಜುಮಾ ಮಸ್ಜಿದ್‌ನ 34ನೇ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಮತಪ್ರವಚನ ಕಾರ್ಯಕ್ರಮವು ಫೆ.7ರಿಂದ 11ರವರೆಗೆ ನಡೆಯಲಿದೆ.

ಫೆ.7ರಂದು ಧ್ಜಜರೋಹಣ, ನೂತನ ಕಟ್ಟದ ಉದ್ಘಾಟನೆಯನ್ನು ಬೊಳ್ಳೂರು ಮಸೀದಿಯ ಹಾಜಿ ಮುಹಮ್ಮದ್ ಅರ್ಹರ್ ಫೈಝಿ ನೆರವೇರಿಸಲಿದ್ದಾರೆ. ಧಾರ್ಮಿಕ ಪ್ರವಚನವನ್ನು ಕೆ.ಐ.ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ, ಫೆ.8ರಂದು ಕಾಸರಗೋಡಿನ ಕೆ.ಎಂ.ಅಬ್ದುಲ್ ಅಝೀರ್ ದಾರಿಮಿ, ಫೆ.9ರಂದು ಝೂಬೈರ್ ದಾರಿಮಿ, ಫೆ.10ರಂದು ಪಾಣತ್ತೂರಿನ ಅಬ್ದುಲ್ ಅಝೀರ್ ಅಶ್ರಫಿ, ಫೆ.11ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅಹ್ಮದ್ ಮುಸ್ಲಿಯಾರ್ ಅಲ್ ಅರ್ಹರಿ, ಸಜಿಪದ ಅಶ್ಫಾಕ ಫೈಝಿ, ಕೇರಳದ ಅಸೈಯ್ಯದ್ ನಜ್‌ಮುದ್ದೀನ್, ಸಚಿವರಾದ ರಮಾನಾಥ ರೈ, ಶಾಸಕರಾದ ಕೆ.ಅಭಯಚಂದ್ರ ಜೈನ್, ಐವನ್ ಡಿಸೋಜಾ, ಪ್ರಮುಖರಾದ ಚಂದ್ರಶೇಖರ ನಾನಿಲ್, ಅನ್ವರ್ ಸಾಧಾತ್, ಇನಾಯತ್ ಆಲಿ ಮೂಲ್ಕಿ ಮತ್ತಿತರರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವಿಶೇಷವಾಗಿ ಬೊಳ್ಳೂರು ಮಸೀದಿಯ ಮುಹಮ್ಮದ್ ಅರ್ಹರ್ ಫೈಝಿ, ಎಂ.ಎ.ಗಫೂರ್, ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಹಸೈನಾಕ ಪಳ್ಳಿ ಗುಡ್ಡೆ, ಅಹ್ಮದ್ ರವೂಫ್ ಸಖಾಫಿ, ಮುಹಮ್ಮದ್ ಇಸ್ಮಾಯಿಲ್ ಹಾಪಿಲ್‌ರನ್ನು ಸಮ್ಮಾನಿಸಲಾಗುವುದು ಎಂದು ಬೊಳ್ಳೂರು ಮಸೀದಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News