×
Ad

ಮೂಡುಬಿದಿರೆ: ಕಂಬಳ ಉಳಿಸಿ ಅಭಿಯಾನ ಬೈಕ್ ರ‍್ಯಾಲಿ

Update: 2017-02-05 19:34 IST

ಮೂಡುಬಿದಿರೆ,ಫೆ.5: ಟೀಂ ಬೆದ್ರ ಯುನೈಟೆಡ್ ಸಹಯೋಗದಲ್ಲಿ ರವಿವಾರ ಕಂಬಳ ಉಳಿಸಿ ಅಭಿಯಾನ ಅಂಗವಾಗಿ ಬೈಕ್ ರ‍್ಯಾಲಿ ನಡೆಯಿತು.

ಜವನೆರ್ ಬೆದ್ರ ಸಂಚಾಲಕ ಅಮರ್ ಕೋಟೆ ಅವರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ತುಳುನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಯುವ ಜನತೆ ಹೋರಾಡಬೇಕಿದೆ. ಜಾತಿ, ಮತ, ಪಕ್ಷ ಬೇಧ ಮರೆತು ಕಂಬಳವನ್ನು ಬೆಂಬಲಿಸಬೇಕು. ಅಭಿಯಾನವನ್ನು ಯುವಜನತೆ ಸ್ಪೂರ್ತಿಯುತವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಆಲಂಗಾರು ಜಂಕ್ಷನ್‌ನಲ್ಲಿ ಉದ್ಯಮಿ ಅಬುಲ್ ಅಲಾ ರ್ಯಾಲಿಯನ್ನು ಉದ್ಘಾಟಿಸಿದರು. 135ಕ್ಕೂ ಅಧಿಕ ಬೈಕ್‌ಗಳೊಂದಿಗೆ ಸವಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದು ಪೇಟೆಯ ಮೂಲಕ ಮುಖ್ಯರಸ್ತೆಯಾಗಿ ವಿದ್ಯಾಗಿರಿ ಅಲ್ಲಿಂದ ಪೊನ್ನೆಚಾರಿ ರಸ್ತೆಯಾಗಿ ಬಸ್ಸು ನಿಲ್ದಾಣಕ್ಕೆ ಬಂದು ರ‍್ಯಾಲಿ ಕೊನೆಗೊಂಡಿತು.

ರೋಯ್,ಹರಿಪ್ರಸಾದ್, ಸುಲ್ತಾನ್, ರಯಾನ್, ಆಶಿಕ್ ಶೆಟ್ಟಿ, ಲಿಂಗಪ್ಪ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು. ಟೀಮ್ ಬೆದ್ರ ಸ್ಥಾಪಕ ಪವನ್ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News