×
Ad

ಅಸೈಗೋಳಿ: ವೀರರಾಣಿ ಅಬ್ಬಕ್ಕ ಉತ್ಸವ ಸಮಾರೋಪ - ಪ್ರೊ.ಡಿ.ವೇದಾವತಿ ಅವರಿಗೆ ಅಬ್ಬಕ್ಕ ಪ್ರಶಸ್ತಿ ಪ್ರದಾನ

Update: 2017-02-05 20:11 IST

ಕೊಣಾಜೆ,ಫೆ.5: ಅಸೈಗೋಳಿಯಲ್ಲಿ ಕಳೆದ ಎರಡು ದಿನಗಳಿಂದ ನಡೆದ ವೀರರಾಣಿ ಅಬ್ಬಕ್ಕ ಉತ್ಸದ ಸಮರೋಪ ಸಮಾರಂಭದಲ್ಲಿ ತುಳು ಕನ್ನಡ ಸಾಹಿತಿ ಪ್ರೊ.ಡಿ.ವೇದಾವತಿ ಅವರಿಗೆ 2017ನೇ ಸಾಲಿನ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ಹಿರಿಯ ರಂಗನಟಿ ರೋಹಿಣಿ ಜಗರಾಮ್ ಹಾಗೂ ಹಿರಿಯ ಸಮಾಜಸೇವಕಿ ಸರಳಾ ಬಿ.ಕಾಂಚನ್ ಅವರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

   ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್, ಸಹೋದರತೆ ಪ್ರೀತಿ ವಿಶ್ವಾಸದಿಂದ ಜನರು ಬಾಳಬೇಕು ಎನ್ನುವ ವಿಶ್ವಾಸದಿಂದ ಈ ಅಬ್ಬಕ್ಕ ಉತ್ಸವವನ್ನು ಆಚರಿಸಲಾಗುತ್ತಿದೆ. ಶಾಂತಿ , ಸೌಹಾರ್ದತೆ ನೆಲೆಗೊಳಿಸುವ ಗುರಿಯನ್ನಿಟ್ಟುಕೊಂಡು ಸಮಿತಿಯವರು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ . ಅಬ್ಬಕ್ಕ ಉತ್ಸವವನ್ನು ಮುಂದೆ ‘ತುಳುನಾಡಿನ ಅಬ್ಬಕ್ಕ ಉತ್ಸವಎಂಬ ಹೆಸರಿನೊಂದಿಗೆ ವಿಜ್ರಂಭಣೆಯಿಂದ ಅಬ್ಬಕ್ಕ ಉತ್ಸವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಇದು ಕೇವಲ ಸರಕಾರಿ ಉತ್ಸವ ಆಗದೇ ಜನರ ಉ್ಸವ ಆಗಬೇಕು ಎಂದು ಹೇಳಿದರು.

 ತುಳುನಾಡಿನ ಇತಿಹಾಸದಲ್ಲಿ ದಿಟ್ಟವಾದ ದೈರ್ಯ ಸಾಹಸದಿಂದ ಪೋರ್ಚುಗೀಸರನ್ನು ಹಿಮ್ಮೆಟ್ಟಿದ ವೀರರಾಣಿ ಅಬ್ಬಕ್ಕ ನಮಗೆಲ್ಲರಿಗೂ ಮಾದರಿಯಾಗಿದ್ದು ಅವರ ಆದರ್ಶ ವ್ಯಕ್ತಿತ್ವವನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕಾದ ಅಗತ್ಯತೆ ಇದೆ. ಹಿರಿಯರ ತ್ಯಾಗಮಯ ಜೀವನವನ್ನು ನಾವು ನೆನಪಿಸುತ್ತಾ, ನಮ್ಮ ತಂದೆ ತಾಯಿಯಂದಿರ ಸೇವೆಯನ್ನು ಮಾಡುತ್ತಾ ಯುವಜನರು ಸಮಾಜದ ಆಸ್ತಿಯಾಗಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು, ಅಬ್ಬಕ್ಕ ಉತ್ಸವವು ನಮ್ಮ ನಾಡಿಗೆ ಮಾತ್ರ ಸೀಮಿತವಾಗದೆ ಅವರ ಸಾಧನೆಯನ್ನು ಇಡೀ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿ ಸೀಮಾಲೋಂಗಣ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಡಿ.ವೇದಾವತಿ ಅವರು, ನನ್ನ ಜೀವನದ ಹಾದಿ ಸಮತಟ್ಟಾಗಿ ಹಾದಿ ಅಲ್ಲದಿದ್ದರೂ ಸಾಹಿತ್ಯ ಕೃಷಿಯ ಮೂಲಕ ಸಮಾಜದ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯವಾಗಿದೆ. ಸಮಾಜದಲ್ಲಿ ನಾನು ಮಾಡಿದ ಸಾಹಿತ್ಯ ಸೇವೆಯನ್ನು ಅಬ್ಬಕ್ಕ ಉತ್ಸವ ಸಮಿತಿಯು ಗುರುತಿಸಿರುವುದಕ್ಕೆ ಎಲ್ಲರಿಗೂ ಕೃತಜ್ಞನಾಗಿದ್ದಾನೆ ಎಂದರು.

ಈ ಸಂದರ್ಭದಲ್ಲಿ ಅಬ್ಬಕ್ಕ ಪುರಸ್ಕಾರ ಪಡೆದ ರೋಹಿಣಿ ಜಗರಾಮ್, ಹಾಗೂ ಸರಳ ಕಾಂಚನ ಅವರು ಮಾತನಾಡಿದರು.

 ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ , ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನನೂರು, ತುಳು ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮೊಹಮ್ಮದ್ ಹನೀಫ್, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಟಿ.ಎಸ್.ಅಬ್ದುಲ್ಲಾ, ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಸಂತೋಷ್ ಕುಮಾರ್ ಶೆಟ್ಟಿ, ಕನ್ನಡ ಸಂಸ್ಕೃತಿ ಇಲಾಖೆಯ ಕುಮಾರ್,ಮೋಗವೀರ ಸಂಘದ ಸದಾನಂದ ಬಂಗೇರ, ಧನಲಕ್ಷ್ಮೀ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷ ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಬ್ಬಕ್ಕ ಉತ್ಸವದ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಲ್ಲಿ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ನಡೆದ ‘ಮಹಿಳೆ ಮತ್ತು ಅಸಾಂಪ್ರದಾಯಿಕ ನೆಲೆಗಳು’ ಎಂಬ ವಿಷಯದಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿಯಲ್ಲಿ ಉಪನ್ಯಾಸಕಿ ಡಾ.ಶೈಲಾ ಹಾಗೂ ಪ್ರಜಾವಾಣಿ ವರದಿಗಾರರಾದ ಕೋಡಿಬೆಟ್ಟು ರಾಜಲಕ್ಷ್ಮೀ ಅವರು ವಿಚಾರ ಮಂಡನೆ ಮಾಡಿದರು. ಡಾ.ಪ್ರೀತಿ ಶುಭಚಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.

ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಮಹಿಳೆ ಮತ್ತು ತಲ್ಲಣಗಳು ಎಂಬ ವಿಷಯದಲ್ಲಿ ಸುಮಾ ವೆಂಕಟ್, ತಾರಾಭಟ್, ಸ್ಮಿತಾ ಪ್ರಭು, ವಿದ್ಯಾಶ್ರೀ ಶೆಟ್ಟಿ, ಶಮಿಮಾ ಕುತ್ತಾರ್, ಲೀಲಾ ದಾಮೋದರ್ ಮುಂತಾದವರು ಭಾಗವಹಿಸಿದ್ದರು. ಲೇಖಕಿ ಭಾಗೀರತಿ ಹೆಗೆ ಅವರು ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News