×
Ad

ಭ್ರಷ್ಟಾಚಾರ ತೊಲಗಿಸಲು ಸಂತರ ಮಾರ್ಗದರ್ಶನ, ಜನರ ಸಹಕಾರ ಅಗತ್ಯ: ಪ್ರಧಾನಿ ನರೇಂದ್ರ ಮೋದಿ

Update: 2017-02-05 21:45 IST

ಉಡುಪಿ, ಫೆ.5: ಭಾರತ ಇಂದು ಹೊಸದ ವ್ಯವಸ್ಥೆ ಸ್ವೀಕರಿಸಲು ಹೊರ ಟಿದೆ. ಭ್ರಷ್ಚಾಚಾರ, ಕಪ್ಪು ಹಣವನ್ನು ಸಮಾಜದಿಂದ ತೊಲಗಿಸುವ ಕಾಲಘಟ್ಟ ದಲ್ಲಿ ನಾವು ಇದ್ದೇವೆ. ಇದಕ್ಕೆ ಸಂತರ ಮಾರ್ಗದರ್ಶನ ಮತ್ತು ಜನರ ಸಹಕಾರ ಅತಿ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ದೆಹಲಿಯಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದರು.

ಅನಕ್ಷರತೆ, ಅಂಧಶ್ರದ್ಧಾ, ಕಪ್ಪು ಹಣ, ಅಜ್ಞಾನ, ಅಪೌಷ್ಠಿಕತೆ, ಭ್ರಷ್ಟಾಚಾರ ದಿಂದ ಭಾರತವನ್ನು ಮುಕ್ತವನ್ನಾಗಿಸಲು ಸಂತರ ದಾರಿ ತೋರಿಸ ಬಲ್ಲರು. ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಜಗತ್ತಿನ ಎಲ್ಲ ಸಮಸ್ಯೆ ಗಳಿಗೆ ಭಾರತದ ಸಂಸ್ಕೃತಿಯಲ್ಲಿ ಪರಿಹಾರ ಇದೆ ಎಂದರು.

ನಾವು ಇಂದು ಕಾಳಧನ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಇದಕ್ಕೆ ಪ್ರೇರಣೆ ನಮ್ಮ ಸಮಾಜ ಕಾಂತ್ರಿಕಾರಿ ಪುರುಷರು. ಭ್ರಷ್ಟಾಚಾರಕ್ಕೆ ಸ್ವಾರ್ಥವೇ ಕಾರಣ. ಸಮಾಜಮುಖಿ ಚಿಂತನೆಯಿಂದ ಭ್ರಷ್ಟಾ ಚಾರವನ್ನು ದೂರ ಮಾಡಬಹುದು ಎಂದು ಅವರು ತಿಳಿಸಿದರು.

ಭಯೋತ್ಪಾದನೆ ಯಾವುದಕ್ಕೂ ಪರಿಹಾರ ಅಲ್ಲ. ಶಾಂತಿಯಿಂದ ಮಾಡುವ ಕೆಲಸ ಆಯುಧದಿಂದ ಮಾಡಲು ಆಗಲ್ಲ. ಇದಕ್ಕೆ ಭಕ್ತಿ, ಧ್ಯಾನ ಅಗತ್ಯವಾಗಿ ಬೇಕು. ಭಾರತೀಯ ಸಂಸ್ಕೃತಿಯಲ್ಲಿ ಇವುಗಳಿಂದ ಹೊರಗೆ ಬರುವ ಶಕ್ತಿ ಇದೆ. ಅದನ್ನು ನಾವು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಅವರು ಹೇಳಿದರು.

ಭಾರತ ದೇಶದ ಸಂಸ್ಕೃತಿಗೆ ಸಂತರ ಕೊಡುಗೆ ಅಪಾರ. ಸಮಾಜದ ಸುಧಾ ರಣೆ ಜವಾಬ್ದಾರಿ ನಮ್ಮ ಎಲ್ಲರ ಮೇಲೆ ಇದೆ. ಸಂತರು ತೋರಿಸಿದ ಆ ಮಾರ್ಗದಲ್ಲಿ ನಾವು ನಡೆಯಬೇಕಾಗಿದೆ. ದೇಶದ ಪರಂಪರೆ, ಸಂಸ್ಕೃತಿಗಾಗಿ ಸಂತರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರ ಬದ್ಧತೆಯನ್ನು ನಾವು ಅರ್ಥ ಮಾಡಬೇಕು. ಸರಕಾರಕ್ಕೆ ನಾವು ತೆರಿಗೆ ಪಾವರ್ತಿ ಸುವ ರೀತಿಯಲ್ಲಿ ಭಗವಂತನಿಗೆ ಸಮಾಜ ಸೇವೆ ಮಾಡುವ ಮೂಲಕ ತೆರಿಗೆ ಪಾವತಿಸಬೇಕಾಗಿದೆ ಎಂದರು.

ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ ಆಶೀರ್ವಚನ ನೀಡಿ, ಗುಜರಾತಿ ನಿಂದ ಆಗಮಿಸಿದ್ದ ಶ್ರೀಕೃಷ್ಣ ದ್ವಾರಕೆಯಲ್ಲಿ ಅತ್ಯಂತ ಉತ್ತಮ ರಾಜ್ಯ ನಿರ್ಮಿಸಿ ದರೆ, ಇದೀಗ ಅದೇ ಗುಜರಾತಿನಿಂದ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಸಮರ್ಥ ಭಾರತವನ್ನು ನಿರ್ಮಿಸಲಿದ್ದಾರೆ. ನಾವು ನಿಮ್ಮ ತಾಂತ್ರಿಕ ಉಪಸ್ಥಿತಿಯಿಂದ ತೃಪ್ತರಾಗಿಲ್ಲ. ನೀವು ಸ್ವಯಂ ಆಗಿ ಉಡುಪಿಗೆ ಆದಷ್ಟು ಬೇಗ ಬರುವಂತಾಗಬೇಕು ಎಂದರು.

ಮಧ್ವಾಚಾರ್ಯರು ಕೇವಲ ಭಕ್ತಿ ಸಂದೇಶವನ್ನು ಸಾರಿರುವುದು ಮಾತ್ರ ವಲ್ಲದೆ ಸಮಾಜ ಸೇವೆಗೂ ಪ್ರಾಮುಖ್ಯತೆ ನೀಡಿದ್ದರು. ಅಲ್ಲದೆ ವಿಶ್ವ ಬಂಧತ್ವದ ಸಂದೇಶ ಕೂಡ ನೀಡಿದ್ದಾರೆ. ನಮ್ಮ ಎರಡನೆ ಪರ್ಯಾಯಕ್ಕೆ ಸ್ವಯಂ ಸೇವಕ ರಾಗಿ ಆಗಮಿಸಿದ್ದ ನರೇಂದ್ರ ಮೋದಿ, ಐದನೆ ಪರ್ಯಾಯಕ್ಕೆ ಪ್ರಧಾನಿಯಾಗಿ ಆಗಮಿಸಬೇಕಾಗಿದೆ. ಸಂತ, ಸಮಾಜ, ಸರಕಾರಗಳ ಸಹಕಾರದಿಂದ ಮಾತ್ರ ಕಲ್ಯಾಣ ದೇಶ ಕಟ್ಟಲು ಸಾಧ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಂತ್ರಾಲಯ ಶ್ರೀರಾಘವೇಂದ್ರ ಮಠದ ಶ್ರೀಸುಬು ಧೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀಗುರುಪ್ರಿಯ ತೀರ್ಥ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು.

ಶೀಘ್ರದಲ್ಲೇ ಉಡುಪಿಗೆ ಬರುತ್ತೇನೆ

ಇದೀಗ ತಾಂತ್ರಿಕವಾಗಿ ಮಾತನಾಡಿರುವುದರಲ್ಲಿ ನನಗೂ ತೃಪ್ತಿ ಇಲ್ಲ. ನಾನು ಕೂಡ ಉಡುಪಿಗೆ ಬರಲು ಉತ್ಸುಕನಾಗಿದ್ದೇನೆ. ಹಲವು ಅವಕಾಶಗಳು ದೊರೆತರು ಬೇರೆ ಬೇರೆ ಕಾರಣಗಳಿಂದ ಉಡುಪಿಗೆ ಬರಲು ಆಗಿಲ್ಲ. ಆದಷ್ಟು ಬೇಗ ಉಡುಪಿಗೆ ಬರಲು ಪ್ರಯತ್ನ ಮಾಡುತ್ತೇನೆ. ದೇವರು ಇಚ್ಛೆ ಇದ್ದರೆ ಆದಷ್ಟು ಬೇಗ ಬರುತ್ತೇನೆ. ಮಧ್ವಾಚಾರ್ಯ ಹುಟ್ಟಿದ ಪುಣ್ಯ ಭೂಮಿಗೆ ಆಗಮಿಸಲು ತುಂಬಾ ಖಷಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News