ನದಿಯಲ್ಲಿ ಮುಳುಗಿ ಮೃತ್ಯು
Update: 2017-02-05 22:05 IST
ಕೋಟ, ಫೆ.5: ನಂಚಾರು ಸೀತಾ ನದಿಯಲ್ಲಿ ಫೆ.3ರಂದು ಮೀನು ಹಿಡಿಯಲು ಹೋದ ನಂಚಾರು ಗ್ರಾಮದ ಹೆಬ್ಬಾರ್ ಬೆಟ್ಟುವಿನ ಬೊಂಬ್ಯಾ ನಾಯ್ಕ್ ಎಂಬವರ ಮಗ ಲಕ್ಷ್ಮಣ ನಾಯ್ಕ್(32) ಎಂಬವರು ಫಿಟ್ಸ್ ಖಾಯಿಲೆ ಉಲ್ಬಣಗೊಂಡು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಮೃತದೇಹವು ಫೆ.4ರಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.