ಬೆಳ್ತಂಗಡಿ: ಕಾರಿಗೆ ಆಕಸ್ಮಿಕ ಬೆಂಕಿ
Update: 2017-02-05 22:20 IST
ಬೆಳ್ತಂಗಡಿ,ಫೆ.5: ವೇಣೂರು ಸಮೀಪದ ಫಂಡಿಂಜೆ ರಕ್ಷಿತಾರಣ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ರವಿವಾರ ಓಮ್ನಿಕಾರೊಂದಕ್ಕೆ ತಾಂತ್ರಿಕ ವೈಫಲ್ಯದಿಂದ ಬೆಂಕಿ ಹತ್ತಿಕೊಂಡಿದೆ.
ವಾಹನ ಕ್ಷಣಮಾತ್ರದಲ್ಲಿ ಪೂರ್ತಿ ಸುಟ್ಟು ಕರಕಲಾಗಿದೆ.ಕಾರನ್ನು ಪಿಲ್ಯದ ಕೃಷ್ಣಪ್ರಸಾದ್ ಎಂಬುವರು ಚಲಾಯಿಸುತ್ತಿದ್ದು ಅವರು ಅದರಲ್ಲಿದ್ದ ಪ್ರಯಾಣಿಕರನ್ನು ಕೂಡಲೇ ಇಳಿಸಿ ಕಾಪಾಡಿದ್ದಾರೆ.