ರೆಡ್‌ಹಿಲ್ ಮುಲ್ಕಿ ತಂಡಕ್ಕೆ‘ಯುನೈಟೆಡ್ ಟ್ರೋಫಿ-2017’
ಮುಲ್ಕಿ,ಫೆ.5:ಇಲ್ಲಿನ ಕಾರ್ನಾಡು ಗಾಂಧೀ ಮೈದಾನಿನಲ್ಲಿ ನಡೆದ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟದಲ್ಲಿ ರೆಡ್‌ಹಿಲ್ ಮುಲ್ಕಿ ತಂಡವು ನವಭಾರತ್ ಕೋಲ್ನಾಡು ತಂಡವನ್ನು ರೋಮಾಂಚಕಾರಿ ಅಂತಿಮ ಹಣಾಹಣಿಯಲ್ಲಿ ಸೊಲಿಸಿ ತಂಡಕ್ಕೆ‘ಯುನೈಟೆಡ್ ಟ್ರೋಫಿ-2017’ ಹಾಗೂ 15,111ರೂ ಪಡೆದರೆ,ದ್ವಿತೀಯ ಸ್ಥಾನಿಯಾದ ನವಭಾರತ್ ಕೋಲ್ನಾಡು ಟ್ರೋಪಿ ಹಾಗೂ 8,222ರೂ ಪಡೆಯಿತು.
ಅಂತಿಮ ಪಂದ್ಯದಲ್ಲಿ ನಾಣ್ಯ ಚಿಮ್ಮುಗೆಯಲ್ಲಿ ಜಯಗಳಿಸಿದ ನವಭಾರತ ಕೋಲ್ನಾಡು ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ರೆಡ್‌ಹಿಲ್ ಮೂಲ್ಕಿ ತಂಡ ನಿಗದಿತ ಮೂರು ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 30 ರನ್ ಗಳಿಸಿದರೆ ನಂತರ ಬ್ಯಾಟ್ ಮಾಡಿದ ನವಭಾರತ್ ತಂಡ ನಿಗದಿತ ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಕೇವಲ 23 ರನ್ ಗಳಿಸಿ 7 ರನ್ನುಗಳಿಂದ ಸೋಲನ್ನು ಕಂಡಿತು.
ಉತ್ತಮ ದಾಂಡಿಗ,ಎಸೆತಗಾರನಾಗಿ ನವಭಾರತ ಕೋಲ್ನಾಡು ತಂಡದ ಪ್ರಕಾಶ್ ಹಾಗೂ ಅಜ್ಮಲ್ ಪ್ರಶಸ್ತಿ ಗಳಿಸಿದರು. ಅಂತಿಮ ಪಂದ್ಯದ ಪಂದ್ಯಶ್ರೇಷ್ಠನಾಗಿ ರೆಡ್‌ಹಿಲ್ ತಂಡದ ನಿತಿನ್ ಮುಲ್ಕಿ ಹಾಗೂ ಸರಣಿ ಶ್ರೇಷ್ಠರಾಗಿ ಶರತ್ ಆಯ್ಕೆಯಾದರು. ವೇದಿಕೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಧನಂಜಯ ಮಟ್ಟು,ಉದ್ಯಮಿ ಜೋಸೆಫ್ ಡಿಸೋಜಾ,ಮುಲ್ಕಿ ನ.ಪಂ. ಸದಸ್ಯ ಪುತ್ತು ಬಾವ,ನ.ಪಂ. ಮಾಜೀ ಅಧ್ಯಕ್ಷ ಶಶಿಕಾಂತ ಶೆಟ್ಟಿ,ಯುವ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಮುಲ್ಕಿ.ಉದ್ಯಮಿ ಶಮೀರ್ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.ಇರ್ಷಾದ್ ಕಾರ್ಯಕ್ರಮ ನಿರಪಿಸಿದರು.ಪಂದ್ಯಾಟದಲ್ಲಿ ಒಟ್ಟು 30 ತಂಡಗಳು ಭಾಗವಹಿಸಿದ್ದವು.ಉಪಾಂತ್ಯ ಪಂದ್ಯಗಳಲ್ಲಿ ರೆಡ್‌ಹಿಲ್ ತಂಡವು ಸಿಟಿಕೋಲ್ನಾಡು ತಂಡವನ್ನು ಸೋಲಿಸಿದರೆ,ನವಭಾರತ್ ಕೋಲ್ನಾಡು ತಂಡವು ರೋಕರ್ಸ್ ಕಾರ್ನಾಡು ತಂಡವನ್ನು ಸೋಲಿಸಿ ಫೈನಲಿಗೇರಿತ್ತು.