×
Ad

ಮೇಲ್ಜಾತಿಯ ಯುವತಿಯನ್ನು ವರಿಸಿದ್ದ ದಲಿತ ಯುವಕನ ಹತ್ಯೆ

Update: 2017-02-05 23:41 IST

ಹಿಸ್ಸಾರ್(ಹರ್ಯಾಣ),ಫೆ.5: ಶಂಕಿತ ಗೌರವ ಹತ್ಯೆ ಪ್ರಕರಣವೊಂದರಲ್ಲಿ ಮೇಲ್ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ದಲಿತ ಯುವಕನೋರ್ವನನ್ನು ಕೊಲೆ ಮಾಡಲಾಗಿದೆ.

ರಾಜೇಶ್ ಕುಮಾರ್ ಅಲಿಯಾಸ್ ಅಮರ್‌ಜೀತ್ ಕೊಲೆಯಾಗಿರುವ ಯುವಕ. ರವಿವಾರ ಮಿರ್ಝಾಪುರ ದನಸು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಆತ ಕಳೆದ ವರ್ಷದ ಅ.23ರಂದು ಮೇಲ್ಜಾತಿಯ ಯುವತಿ ಯನ್ನು ಮದುವೆಯಾಗಿದ್ದ. ಯುವತಿಯ ಮನೆಯವರು ನಮಗೆ 2-3 ಬಾರಿ ಗಂಭೀರ ಪರಿಣಾಮದ ಬೆದರಿಕೆಯನ್ನೂ ಒಡ್ಡಿದ್ದರು. ನನ್ನ ತಮ್ಮ ಕಳೆದ ಎರಡು ದಿನಗಳಿಂದ ನಾಪತ್ತೆ ಯಾಗಿದ್ದ ಎಂದು ರಾಜೇಶ ಕುಮಾರ್‌ನ ಸೋದರ ಸುದ್ದಿಗಾರರಿಗೆ ತಿಳಿಸಿದ. ಅಮನ್‌ನಗರದ ಮಿಲ್‌ಗೇಟ್ ನಿವಾಸಿಯಾಗಿದ್ದ ರಾಜೇಶ್ ಕುಮಾರ್(22) ಶುಕ್ರವಾರದಿಂದ ನಾಪತ್ತೆಯಾಗಿದ್ದ. ದಂಪತಿಗೆ ಐದು ತಿಂಗಳ ಮಗುವಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News