ಬಾವಿ, ಕೊಳವೆಬಾವಿ ಕೊರೆಸಲು ಅನುಮತಿ ಅಗತ್ಯ

Update: 2017-02-05 18:33 GMT

ಕಾಸರಗೋಡು, ೆ.5: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ಹಿನ್ನಲೆಯಲ್ಲಿ ಕುಡಿಯುವ ನೀರನ್ನು ಇತರ ಉದ್ದೇಶಗಳಿಗೆ ಬಳಸುವುದಕ್ಕೆ ನಿರ್ಬಂಧ ಹೇರಲಾಗಿದೆ.

ಡಿಸಿ ಕೆ.ಜೀವನ್ ಬಾಬು ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಅವಲೋಕನಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕುಡಿಯುವ ನೀರಿಗಾಗಿ ಹೊಳೆಗೆ ತಡೆಗೋಡೆ ಕಟ್ಟಿ ಶೇಖರಿಸಿಟ್ಟಿರುವ ನೀರನ್ನು ಪರವಾನಿಗೆ ಇಲ್ಲದೆ ಕೃಷಿ ಹಾಗೂ ಇತರ ಉದ್ದೇಶಗಳಿಗೆ ಮೋಟಾರ್ ಪಂಪ್ ಮೂಲಕ ಮೇಲಕ್ಕೆತ್ತಿದಲ್ಲಿ ಕಟ್ಟುನಿಟ್ಟಿನ ಕ್ರಮದ ಜೊತೆಗೆ ಪಂಪ್‌ಸೆಟ್‌ನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಪಂಚಾಯತ್ ಕಟ್ಟಡ ನಿರ್ಮಾಣ ಕಾಯ್ದೆಯಂತೆ ಬಾವಿ, ಕೊಳವೆಬಾವಿ ಕೊರೆಸಲು ಪಂಚಾಯತ್‌ನ ಅನುಮತಿ ಪಡೆಯುವುದು ಅತ್ಯಗತ್ಯ. ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆಸಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News