ಚಾರ್ಮಾಡಿಯಲ್ಲಿ ಇಸ್ಲಾಮಿಕ್ ಕಲಾಮೇಳ-2017

Update: 2017-02-06 10:13 GMT

ಬೆಳ್ತಂಗಡಿ, ಫೆ.6: ಬೆಳ್ತಂಗಡಿ ರೇಂಜ್ ಜಂಇಯತ್ತುಲ್ ಮುಅಲ್ಲಿಮೀನ್ ವತಿಯಿಂದ ರೇಂಜ್ ಮಟ್ಟದ 14ನೆ ಇಸ್ಲಾಮಿಕ್ ಕಲಾಮೇಳ-2017 ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮವು ಚಾರ್ಮಾಡಿಯ ಜಲಾಲಿಯ ನಗರದ ಇಝ್ಝತುಲ್ ಇಸ್ಲಾಮ್ ಮದ್ರಸ ಸಭಾಂಗಣದಲ್ಲಿ ರವಿವಾರ ಜರಗಿತು.

ಬೆಳಗ್ಗೆ ನಡೆದ ಕಾರ್ಯಕ್ರಮವನ್ನು ಜಲಾಲಿಯ ನಗರದ ಖತೀಬ್ ಅಬ್ಬಾಸ್ ಫೈಝಿ ಉದ್ಘಾಟಿಸಿದರು. ಬಿಆರ್‌ಜೆಎಂ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಫೈಝಿ ದುಆಗೈದರು.

ಜಲಾಲಿಯ ನಗರ ಮಸೀದಿ ಅಧ್ಯಕ್ಷ ಸಿ.ಎಚ್.ಮುಹಮ್ಮದ್ ಉತ್ತಿನಡ್ಕ, ಯಂಗ್‌ಮೆನ್ಸ್ ಅಧ್ಯಕ್ಷ ಅಬ್ದುಲ್ ಖಾದರ್ ಫಾಲ್ಕನ್, ಎಸ್ಕೆಎಸ್ಸೆಸ್ಸೆಫ್ ಜಲಾಲಿಯಾ ನಗರ ಶಾಖೆಯ ಅಧ್ಯಕ್ಷ ಅಬ್ಬಾಸ್ ಹೊಸಂಗಡಿ, ಅಹ್ಮದ್, ಅಬ್ದುಲ್ ಖಾದರ್ ಎವರೆಸ್ಟ್ ಮೊದಲಾದವರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಎಸ್ಕೆಐಎಂವಿಬಿ ಮದ್ರಸ ತಪಾಸಣಾಧಿಕಾರಿ ಅಬ್ದುಲ್ ರಶೀದ್ ಮುಸ್ಲಿಯಾರ್ ಉದ್ಘಾಟಿಸಿದರು.

ಮುಹಮ್ಮದ್ ಅಶ್ರಫ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಅಸ್ಸೈಯದ್ ತ್ವಾಹ ಜಿಫ್ರಿ ಮುತ್ತುಕೋಯ ತಂಙಳ್ ದುಆ ನೆರವೇರಿಸಿದರು. ಮೇಳದ ಸ್ವಾಗತ ಸಮಿತಿಯ ಅಧ್ಯಕ್ಷ ಜಲಾಲ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಕ್ಕಿಂಜೆ ಮುದರ್ರಿಸ್ ಐ.ಕೆ.ಮುಸಾ ದಾರಿಮಿ ಅನುಸ್ಮರಣಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಶಂಸುದ್ದೀನ್ ದಾರಿಮಿ, ಅಬ್ಬಾಸ್ ಫೈಝಿ, ಬಶೀರ್ ದಾರಿಮಿ, ಅಬ್ದುಲ್ ರಝಾಕ್, ಯು.ಕೆ.ಹನೀಫ್, ಮೂಸಾ ಕುಂಞಿ ಬಿ., ಮುಹಮ್ಮದ್ ಶರೀಫ್ ಫೈಝಿ, ಅಬೂಬಕರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

* ಕಲಾ ಮೇಳದ ವಿಜೇತರು: ಇಸ್ಲಾಮಿಕ್ ಕಲಾಮೇಳದಲ್ಲಿ ಕಕ್ಕಿಂಜೆ ಮದ್ರಸವು ಪ್ರಥಮ ಸ್ಥಾನ ಗಳಿಸಿತು. ಚಾರ್ಮಾಡಿಯ ಇಝ್ಝತ್ತುಲ್ ಇಸ್ಲಾಮ್ ಮದ್ರಸ ದ್ವಿತೀಯ ಹಾಗೂ ಪೂಂಜಾಲಕಟ್ಟೆ ಮದ್ರಸ ತೃತೀಯ ಸ್ಥಾನ ಗಳಿಸಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಹಂಝ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ಅಬ್ದುಲ್ ಮಜೀದ್ ದಾರಿಮಿ ಸ್ವಾಗತಿಸಿದರು. ಅಹ್ಮದ್ ಸವಾದ್ ಅಝ್‌ಹರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News