ಪುದು ಗ್ರಾಪಂ ಮಾಜಿ ಸದಸ್ಯನಿಗೆ ಜೀವ ಬೆದರಿಕೆ ಪ್ರಕರಣ: ಸೂಕ್ತ ತನಿಖೆಗೆ ಎಸ್.ಡಿ.ಪಿ.ಐ. ಆಗ್ರಹ
Update: 2017-02-06 16:45 IST
ಬಂಟ್ವಾಳ, ಫೆ.6: ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇಕ್ಬಾಲ್ ಅಮ್ಮೆಮಾರ್ ಅವರಿಗೆ ಪತ್ರದ ಮೂಲಕ ಕೊಲೆ ಬೆದರಿಕೆ ಒಡ್ಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಎಸ್‌ಡಿಪಿಐ ಪುದು ವಲಯ ಸಮಿತಿ ಆಗ್ರಹಿಸಿದೆ.
ಫರಂಗಿಫೇಟೆಯು ಕೋಮು ಸೂಕ್ಷ್ಮ ಪ್ರದೇಶವಾಗಿರುವ ಫರಂಗಿಪೇಟೆಯಲ್ಲಿ ಶಾಂತಿ, ಸೌಹಾರ್ದ ಕೆಡಿಸಲು ದುಷ್ಕರ್ಮಿಗಳು ಸಂಚು ರೂಪಿಸುತ್ತಿದ್ದು ಇದನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಬೆದರಿಕೆ ಪತ್ರದ ಹಿಂದಿರುವ ರೂವಾರಿಗಳನ್ನು ಒಂದು ವಾರದೊಳಗೆ ಪತ್ತೆ ಹಚ್ಚಬೇಕು. ಇಲ್ಲವಾದಲ್ಲಿ ಫರಂಗಿಪೇಟೆ ಠಾಣೆಯೆದುರು ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಸುಲೈಮಾನ್ ಉಸ್ತಾದ್ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.