ಮಿಸ್ಟರ್ ಬಂಟ್, ಮಿಸ್ ಬಂಟ್ ಮತ್ತು ಬಂಟ್ಸ್ ಕಪಲ್ ಸ್ಪರ್ಧೆ
Update: 2017-02-06 17:50 IST
ಮಂಗಳೂರು, ಫೆ.6: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ತೃತೀಯ ವರ್ಷದ ಸಂಭ್ರಮಾಚರಣೆಯು ಫೆ.7ರಂದು ಬಂಟ್ವಾಳದಲ್ಲಿ ಜರಗಲಿದೆ. ಈ ಸಂದರ್ಭ ಮಿಸ್ಟರ್ ಬಂಟ್, ಮಿಸ್ ಬಂಟ್ ಮತ್ತು ಕಾವೇರಿ ಫೋರ್ಡ್ ಪ್ರಾಯೋಜಿತ ಬಂಟ್ಸ್ ಕಪಲ್ ಸ್ಪರ್ಧೆ ಜರಗಲಿದೆ ಎಂದು ಕಾರ್ಯಕ್ರಮ ಸಂಯೋಜಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.
ಇದಲ್ಲದೆ ಉದಯರಾಗ, ಭೂತಾಳ ಪಾಂಡ್ಯ ವೈಭವ ತುಳು ರೂಪಕ, ಪಟ್ಲ ಸತೀಶ್ ಶೆಟ್ಟಿ ಹಿಮ್ಮೇಳದೊಂದಿಗೆ ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶಿಸಿ, ಡಾ.ವರ್ಷಾ ಶೆಟ್ಟಿ ಮತ್ತು ದಿಶಾ ಶೆಟ್ಟಿ ಅಭಿನಯದ ‘ನೆನಪಾದಳಾ ಶಕುಂತಳಾ’ ಯಕ್ಷ ನಾಟ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ತಿಳಿಸಿದ್ದಾರೆ.