ಕರ್ನಾಟಕ ಯುವ ರತ್ನ ಪ್ರಶಸ್ತಿಗೆ ಆಯ್ಕೆ
Update: 2017-02-06 18:03 IST
ಮಂಗಳೂರು, ಫೆ.6: ಸಾಹಿತ್ಯ ಮತ್ತು ಪತ್ರಿಕೋದ್ಯಮ ರಂಗದ ಸಾಧನೆಗಾಗಿ ಮಾಲತಿ ಶೆಟ್ಟಿ ಮಾಣೂರುಗೆ ‘ಕರ್ನಾಟಕ ಯುವ ರತ್ನ’ ಪ್ರಶಸ್ತಿ ಲಭಿಸಿದೆ. ಅಮೃತ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿಯಾಗಿ, ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷೆಯಾಗಿ, ಅಶೋಕ ನಗರ ಬಂಟರ ಸಂಘದ ಉಪಾಧ್ಯಕ್ಷೆಯಾಗಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಈಗಾಗಲೆ ‘ಕರುನಾಡಸಿರಿ ರಾಜ್ಯಪ್ರಶಸ್ತಿ’, ‘ಪ್ರಜಾಸೇವಾರತ್ನ’ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ