×
Ad

ಮೂಡುಬಿದಿರೆ : ವಿದ್ಯಾರ್ಥಿ ಫೆಸ್ಟ್ 2017

Update: 2017-02-06 18:29 IST

ಮೂಡುಬಿದಿರೆ,ಫೆ.6 : ಮೂಡುಬಿದಿರೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿ ಫೆಸ್ಟ್ 2017 ಕಾರ್ಯಕ್ರಮವು ಇಲ್ಲಿನ ಸಮಾಜಮಂದಿರದಲ್ಲಿ ಭಾನುವಾರ ನಡೆಯಿತು. ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಎಂ.ಹೆಚ್. ಇಕ್ಬಾಲ್ ಧ್ವಜಾರೋಹಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬದ್ರಿಯಾ ಟೌನ್ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫಾ ಯಮಾನಿ ದುಆ ನೆರವೇರಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಅಬ್ದುರ್ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು.

 ಜಿಲ್ಲಾ ಮದರಸ ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ಹಾಜಿ ರಫೀಕ್, ಕೋಶಾಧಿಕಾರಿ ಹಾಜಿ ಮೆಟ್ರೋ ಶಾಹುಲ್ ಹಮೀದ್, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಹಾಜಿ ಅಬ್ದುಲ್ಲತೀಫ್ ಮದರ್ ಇಂಡಿಯಾ, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ರಫೀಕ್ ದಾರಿಮಿ, ಕೋಶಾಧಿಕಾರಿ ಹಾಜಿ ಬಾವುದ್ದೀನ್, ಸ್ವಾಗತ ಸಮಿತಿಯ ಉಪಾಧ್ಯಕ್ಷ ಅಬ್ದುಲ್ಲಾ ಕೋಟೆಬಾಗಿಲು,ಎಸ್.ಕೆ.ಎಸ್.ಎಸ್.ಎಫ್.ವಲಯಾಧ್ಯಕ್ಷ ಅಝೀರ್ ಮಾಲಿಕ್, ಕ್ಲಸ್ಟರ್ ಅಧ್ಯಕ್ಷ ಎನ್.ಇಸ್ಮಾಯಿಲ್, ಮ್ಯಾನೇಜ್‌ಮೆಂಟ್ ಉಪಾಧ್ಯಕ್ಷ ಉಸ್ಮಾನ್ ಏರಿಂಡಿಯಾ, ಕಾರ್ಯದರ್ಶಿ ಶಬೀರ್ ಅಹ್ಮದ್, ಕೋಶಾಧಿಕಾರಿ ಅಶ್ರಫ್ ಮರೋಡಿ, ಗಂಟಾಲ್‌ಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಬಾನಿಲು, ಮಾಜಿ ಅಧ್ಯಕ್ಷ ಮುಷ್ತಾಕ್ ಅಹ್ಮದ್, ಬಾರ್ದಿಲ ಜಮಾಅತ್ ಅಧ್ಯಕ್ಷ ಬಿ.ಸಿ. ಮಾಮು, ಕಾರ್ಯದರ್ಶಿ ಅಬೂಬಕ್ಕರ್ ಮಾಸ್ಟರ್, ಪಡ್ಡಂದಡ್ಕ ಜಮಾಅತ್ ಕಾರ್ಯದರ್ಶಿ ಬಶೀರ್, ಕೋಶಾಧಿಕಾರಿ ಎಸ್.ಕೆ. ರಝಾಕ್, ಅಂಗರಕರ್ಯ ಕೋಶಾಧಿಕಾರಿ ಆಲಿಯಬ್ಬ, ಹಾಜಿ ನಝೀಮುದ್ದೀನ್,ಜ್ಯೋತಿನಗರ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಶಂಸುದ್ದೀನ್, ಹೊಕ್ಕಾಡಿಗೋಳಿ ಜುಮಾ ಮಸೀದಿ ಅಧ್ಯಕ್ಷ ನಾಸಿರುದ್ದೀನ್, ಕಾರ್ಯದಶಿ ಅಲ್ತಾಫ್, ಕೋಶಾಧಿಕಾರಿ ಹಸನ್ ಕುಟ್ಟಿ, ಗುಂಡುಕಲ್ ಜುಮಾ ಮಸೀದಿ ಅಧ್ಯಕ್ಷ ಯೂಸೂಫ್, ವಾಲ್ಪಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಪೆರಾಡಿ ಜಮಾಅತ್ ಅಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

ಮೂಡುಬಿದಿರೆ ರೇಂಜ್ ವ್ಯಾಪ್ತಿಯ 25 ಮದರಸಗಳಿಂದ 335 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಸ್ಸಲಾಂ ಯಮಾನಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News