ಕೇಂದ್ರ ಬಜೆಟ್‌ನಲ್ಲಿ ಅಂಗನವಾಡಿ ನೌಕರರ ನಿರ್ಲಕ್ಷ ವಿರೋಧಿಸಿ ನೌಕರರಿಂದ ಧರಣಿ
ಉಡುಪಿ, ಫೆ.6: ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಅಂಗನ ವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಳ ಮಾಡದಿರುವುದನ್ನು ವಿರೋಧಿಸಿ ಉಡುಪಿ ತಾಲೂಕು ಅಂಗನವಾಡಿ ಕಾರ್ಯಕರ್ತರೆಯರ ಹಾಗೂ ಸಹಾಯಕಿರ ಸಂಘ ಸೋಮವಾರ ಉಡುಪಿ ತಾಲೂಕು ಕಚೇರಿ ಎದುರು ಧರಣಿ ನಡೆಸಿತು.
2011-12ರ ಬಜೆಟ್‌ನಲ್ಲಿ ಯುಪಿಎ ಸರಕಾರ ಮಾಸಿಕ 1500ರೂ. ಮತ್ತು 750ರೂ. ಗೌರವಧನ ಹೆಚ್ಚಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಗೌರವ ಧನ ಹೆಚ್ಚಳವಾಗಿಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಗಳಾದರೂ ಈವರೆಗೆ ಗೌರವಧನ ಹೆಚ್ಚಳ ಮಾಡಿಲ್ಲ. ಕೇಂದ್ರ ಸರಕಾರದ ಕಾರ್ಮಿಕ ಮತ್ತು ಮಹಿಳಾ ವಿರೋಧಿ ನೀತಿ ಖಂಡನೀಯ ಎಂದು ಸಂಘದ ತಾಲೂಕು ಅಧ್ಯಕ್ಷೆ ಲೀಲಾ ತಿಳಿಸಿದರು.
18ಸಾವಿರ ರೂ. ಕನಿಷ್ಠ ವೇತನ ಜಾರಿ ಮಾಡಬೇಕು. 3ಸಾವಿರ ರೂ. ಮಾಸಿಕ ಪಿಂಚಣೆ ಯೋಜನೆ ರೂಪಿಸಬೇಕು. ಇಎಸ್‌ಐಪಿಎಫ್ ಗ್ರಾಚ್ಯುಟಿ ಯೋಜನೆಗಳನ್ನು ಜಾರಿಗೆ ತರಬೇಕು. ತುರ್ತಾಗಿ ಇಎಸ್‌ಐ ಜಾರಿಗೆ ಬರು ವವರೆಗೆ ಅನಾರೋಗ್ಯಕ್ಕೆ ಒಳಗಾದವರಿಗೆ ಕನಿಷ್ಠ ಒಂದು ತಿಂಗಳ ಗೌರವಧನ ಸಹಿತ ರಜೆ ನೀಡಬೇಕು. ಪ್ರಭಾರ ಭತ್ಯೆ ಡಿಎ ಸೇವಾ ಹಿರಿತನವನ್ನು ಪರಿ ಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಂಘದ ರಾಜ್ಯ ಉಪಾಧ್ಯಕ್ಷೆ ಲೀಲಾವತಿ ಕೆ. ಮಾತನಾಡಿದರು. ಬಳಿಕ ಈ ಕುರಿತು ಮನವಿ ಯನ್ನು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಸಂಘದ ಕಾರ್ಯದರ್ಶಿ ಜಯಂತಿ, ಉಪಾಧ್ಯಕ್ಷೆ ಶಶಿಕಲಾ, ಕೋಶಾಧಿಕಾರಿ ಗೀತಾ ಪಿ., ಜತೆ ಕಾರ್ಯದರ್ಶಿ ಶಕುಂತಳ ಮತ್ತಿತರರು ಉಪಸ್ಥಿತರಿದ್ದರು.