ಮಂಗಳೂರು : ಬೈಕ್ ಅಪಘಾತ - ವಿದ್ಯಾರ್ಥಿ ಮೃತ್ಯು
Update: 2017-02-06 19:17 IST
ಮಂಗಳೂರು, ಫೆ. 6: ಬೈಕ್ ಹಾಗೂ ಲಾರಿ ನಡುವಿನ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಕುಂಪಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಮೃತನನ್ನು ಸೈಂಟ್ ಅಲೋಶಿಯಸ್ ಇನ್ಸ್‌ಟಿಟೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಬೀರಿ ಇಲ್ಲಿನ ಎಂಬಿಎ ವಿದ್ಯಾರ್ಥಿ ಫೆರ್ಮಿ ಕ್ರಾಸ್ತಾ (23) ಎಂದು ಗುರುತಿಸಲಾಗಿದೆ.
ಮೂಲತಃ ಕುಂದಾಪುರದ ನಿವಾಸಿಯಾಗಿರುವ ಫೆರ್ಮಿ ಕ್ರಾಸ್ತಾ ಸೋಮವಾರ ಸಂಜೆ ದ್ವಿಚಕ್ರ ವಾಹನದಲ್ಲಿ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕುಂಪಲ ಮಸೀದಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಉಳ್ಳಾಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.