ಫೆ.8: ನೀರು ಸರಬರಾಜು ಸ್ಥಗಿತ
Update: 2017-02-06 19:29 IST
ಮಂಗಳೂರು, ಫೆ.6: ಮನಪಾ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದಲ್ಲಿ ನಾನ್ ರಿಟರ್ನ್ ವಾಲ್ವ್ ದುರಸ್ತಿ ಹಾಗೂ ತುಂಬೆಯಿಂದ 18 ಎಂ.ಜಿ.ಡಿ. ನೀರನ್ನು ಪೂರೈಸುವ ಮುಖ್ಯ ಕೊಳವೆಯಲ್ಲಿ ಅಡ್ಯಾರ್ ಕಟ್ಟೆ ಬಳಿ ಸೋರುವಿಕೆ ಉಂಟಾಗಿದೆ. ಇದರ ದುರಸ್ತಿ ಕಾರ್ಯವನ್ನು ಫೆ.8ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಈ ಅವಧಿಯಲ್ಲಿ ಮಂಗಳೂರು ನಗರದ ಭಾಗಶ: ಪ್ರದೇಶ ಮತ್ತು ಸುರತ್ಕಲ್ ವ್ಯಾಪ್ತಿಯಲ್ಲಿ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮನಪಾ ಆಯುಕ್ತರ ಪ್ರಕಟನೆ ತಿಳಿಸಿದೆ.