×
Ad

ಮೀನುಗಾರಿಕೆಗೆ ತೆರಳಿದ 2 ಬೋಟು ಮುಳುಗಡೆ ; 30ಲಕ್ಷಕ್ಕೂ ಹೆಚ್ಚು ನಷ್ಟ

Update: 2017-02-06 20:05 IST

ಭಟ್ಕಳ,ಫೆ.6: ಸೋಮವಾರ ಬೆಳಗಿನ ಜಾವ ಅಳ್ವೇಕೋಡಿಯಿಂದ ಮೀನುಗಾರಿಕೆಗೆ ತೆರಳಿದ ಎರಡು ಬೋಟುಗಳು ಸಂಜೆ 5ಗಂಟೆ ಸುಮಾರು ಮುಳುಗಡೆಯಾಗಿದ್ದು ಸುಮಾರು 30ಲಕ್ಷ ಕ್ಕೂ ಅಧಿಕ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಅಳ್ವೆಕೋಡಿಯ ಯಶವಂತ ಮಾಸ್ತಿ ಮೋಗರ್ ಹಾಗೂ ಲಕ್ಷ್ಮಣ ಶನಿಯಾರ ಮೊಗೇರ್ ರಿಗೆ ಸೇರಿದ ದುರ್ಗಾಗೌರಿ ಹಾಗೂ ಧನಲಕ್ಷ್ಮಿ ಎಂಬ ಎರಡು ಬೋಟುಗಳು ತೆಂಗಿನಗುಂಡಿ ಸಮುದ್ರ ಕಿನಾರೆಯಲ್ಲಿ ಮುಳುಗಡೆಯಾಗಿದ್ದು ಮೀನುಗಾರಿಕೆ ನಡೆಸುತ್ತಿದ್ದ 8 ಜನ ಮೀನುಗಾರರನ್ನು ಸ್ಥಳಿಯ ಮೀನುಗಾರರು ರಕ್ಷಿಸಿದ್ದಾರೆ.

ತಂಗಿನಗುಂಡಿ ಸಮುದ್ರ ಕಿನಾರೆಯಲ್ಲಿ ಹೂಳು ತುಂಬಿದ್ದು ರಭಸವಾಗಿ ಏಳುವ ತೆರೆಗಳಿಗೆ ಸಿಲುಕಿ ಈ ದುರಂತ ಸಂಭವಿಸಿದೆ ಎಂದು ಸ್ಥಳಿಯರು ಹೇಳಿದ್ದಾರೆ.

ಗ್ರಾಮೀಣ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News