×
Ad

ಬಸ್ಸಿಗೆ ಢಿಕ್ಕಿ ಹೊಡೆದು ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿ

Update: 2017-02-06 20:14 IST

ಉಳ್ಳಾಲ,ಫೆ.6: ಮಂಗಳೂರಿನಿಂದ ತಲಪಾಡಿಯ ಕಡೆಗೆ ಮೀನನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವೊಂದು ಉಚ್ಚಿಲದಲ್ಲಿ ಎದುರಿನಿಂದ ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ವಾಹನವು ರಸ್ತೆ ಮದ್ಯದ ಡಿವೈಡರ್‌ಗೆ ಉರುಳಿ ಬಿದ್ದ ಘಟನೆ ಸೋಮವಾರ ನಡೆದಿದೆ.

    ಅಪಘಾತದಲ್ಲಿ ಪಿಕಪ್ ವಾಹನದಲ್ಲಿದ್ದ ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನದಲ್ಲಿ ರಾಶಿಗಟ್ಟಲೆ ಮೀನುಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿತ್ತು.

ಬಳಿಕ ಸ್ಥಳೀಯರು ಒಟ್ಟು ಸೇರಿ ಗಾಯಾಳುಗಳನ್ನು ಸಂತೈಸಿ, ರಸ್ತೆಯಲ್ಲಿ ಬಿದ್ದಿದ್ದ ರಾಶಿಗಟ್ಟಲೆ ಮೀನುಗಳನ್ನು ಪಿಕ್‌ಅಪ್ ವಾಹನಕ್ಕೆ ತುಂಬಿಸಿಸಲು ಸಹಕರಿಸಿದರು.

ಚಿತ್ರ:ಉಳ್ಳಾಲ್,ಫೆಬ್ರವರಿ-6=3(1)ಉಚ್ಚಿಲದಲ್ಲಿ ಪಿಕ್‌ಅಪ್ ವಾಹನ ಪಲ್ಟಿಯಾಗಿ ಮೀನುಗಳು ರಸ್ತೆಗೆ ಚೆಲ್ಲಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News