ಬೆಂಗಳೂರಿನಲ್ಲಿ ಪ್ರಚಾರ ಸಭೆ ಹಾಗೂ ಸ್ವಾಗತ ಸಮಿತಿ ಉದ್ಘಾಟನೆ
Update: 2017-02-06 21:32 IST
ಮಂಗಳೂರು, ಫೆ. 6: ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕೋತ್ಸವದ ಪ್ರಯುಕ್ತ ಫೆ. 18ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಸಮ್ಮೇಳನದ ಪ್ರಚಾರಾರ್ಥ ಸೋಮವಾರ ಬೆಂಗಳೂರಿನ ಕೆ. ಆರ್. ಪುರಂನಲ್ಲಿ ಪ್ರಚಾರ ಸ್ವಾಗತ ಸಮಿತಿ ಕಚೇರಿಯನ್ನು ಉದ್ಘಾಟಿಸಲಾಯಿತು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ಕಚೇಯ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಪ್ರಚಾರ ಪ್ರತಿಗಳನ್ನು ಉನೈಸ್ ಪೆರಾಜೆ ಬಿಡುಗಡೆಗೊಳಿಸಿದರು. ಸೈಫುಲ್ಲ ಫಝಲ್ ಖಾನ್, ಇರ್ಷಾದ್ ಕೆರೆಕಾಡು ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು. ಸಭೆಯಲ್ಲಿ ಚೇರಿ ನಿರ್ವಾಹಕ ಅಶ್ರಫ್ ಪೆರ್ಲಂಬಾಡಿ ಸ್ವಾಗತಿಸಿ, ಅಸ್ಭಾಕ್ ಸೈಯದ್ ವಂದಿಸಿದರು ಎಂದು ಕನ್ವೀನರ್ ಇಕ್ಬಾಲ್ ಬಾಳಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.