ಕರಾವಳಿ ಫಾರ್ಮಸಿ ಕಾಲೇಜ್‌ಗೆ ಬಿ.ಫಾರ್ಮ ಹಾಗೂ ಎಮ್. ಫಾರ್ಮದಲ್ಲಿ ಹಲವು ರ‍್ಯಾಂಕ್ ಗಳು
ಮಂಗಳೂರು, ಫೆ. 6: ನಗರದ ವಾಮಂಜೂರಿನಲ್ಲಿರುವ ಪ್ರತಿಷ್ಠಿತ ಕರಾವಳಿ ಫಾರ್ಮಸಿ ಕಾಲೇಜಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಮೇ 2016ನೆ ಸಾಲಿನಲ್ಲಿ ನಡೆಸಿದ ಅಂತಿಮ ಬಿ.ಫಾರ್ಮಾ ಪದವಿ ಹಾಗೂ ಎಮ್.ಫಾರ್ಮಾ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಹಲವು ರ್ಯಾಂಕ್‌ಗಳನ್ನು ಗಳಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿದೆ.
ಬಿ.ಫಾರ್ಮಾ ಭಾಗದಲ್ಲಿ ಖತೀಜ ನಿಷ್ಮ- ಇನ್ಸ್‌ಟ್ರುಮೆಂಟಲ್ ಬಯೋಮೆಡಿಕಲ್ ಅನಾಲಿಸಿಸ್‌ನಲ್ಲಿ 10ನೆ ರ್ಯಾಂಕ್ ಮತ್ತು ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 9ನೆ ರ್ಯಾಂಕ್. ಝೈನಭಾ ಫೈರೋಝಾ- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 4ನೆ ರ್ಯಾಂಕ್. ಮೌಶಿಕತ್- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 6ನೆ ರ್ಯಾಂಕ್. ಅತಿರಾ ವಿ.ಪಿ- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 8ನೆ ರ್ಯಾಂಕ್. ಸಬರಿ ಕೃಷ್ಣಾ.ಪಿ.ಎಮ್- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 8ನೆ ರ್ಯಾಂಕ್. ಅಮೀರಾ- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 9ನೆ ರ್ಯಾಂಕ್. ಆಯಿಷತ್ ಝಹೀಮ- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 9ನೆ ರ್ಯಾಂಕ್. ಜಮೀಲಾ.ಟಿ.ಎ- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 9ನೆ ರ್ಯಾಂಕ್. ಮುಹಮ್ಮದ್ ಶಾಜಿಲ್.ವಿ.ಪಿ- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 10ನೆ ರ್ಯಾಂಕ್. ಸಫಿದ.ಟಿ.ಪಿ- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 10ನೆ ರ್ಯಾಂಕ್. ವಿಂಧುಜಾ ವಿಜಯನ್- ಅಡ್ವಾನ್ಸ್‌ಡ್ ಇಂಡಸ್ಟ್ರಿಯಲ್ ಫಾರ್ಮಾಸಿಯಲ್ಲಿ 10ನೆ ರ್ಯಾಂಕ್ ಪಡೆದಿದ್ದಾರೆ.
ಎಂ.ಫಾರ್ಮಾ ವಿಭಾಗದಲ್ಲಿ ಸೌಜನ್ಯ ಕುಮಾರಿ-ಫಾರ್ಮಾಸ್ಯೂಟಿಕಲ್‌ನಲ್ಲಿ 10ನೆ ರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಕರಾವಳಿ ಕಾಲೇಜಿನ ಬಿ.ಎಸ್ಸಿ ಫ್ಯಾಶನ್ ಡಿಸೈನಿಂಗ್ ಪದವಿಯಲ್ಲಿ ವಿಶಾಲಾಕ್ಷಿ ಅಮ್ಮಲ್.ಜೆ 1ನೆ ರ್ಯಾಂಕ್ ಮತ್ತು ಲಿಜಿ ಕೆ ಓಮಾನ್ 2ನೆ ರ್ಯಾಂಕ್ ಹಾಗೂ ಬಿ.ಎಚ್.ಎಮ್ (ಹೊಟೇಲ್ ಮ್ಯಾನೇಜ್‌ಮೆಂಟ್) ಪದವಿ ಪರೀಕ್ಷೆಯಲ್ಲಿ ಮಹೇಶ್ ಬಾಲಕೃಷ್ಣನ್ 2ನೆ ರ್ಯಾಂಕನ್ನು ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.