ಸುರತ್ಕಲ್: ಪಿ ಎಫ್ ಐ ನಿಂದ ಬೃಹತ್ ರಕ್ತದಾನ ಶಿಬಿರ
Update: 2017-02-06 21:49 IST
ಸುರತ್ಕಲ್,ಫೆ.6: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ಘಟಕ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ವಜನಿಕ ಬೃಹತ್ ರಕ್ತದಾನ ಶಿಬಿರವು ರವಿವಾರ ಸುರತ್ಕಲ್ ತಾರಾ ಟವರ್‌ನ ರಾಜ್ ಮಹಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುರತ್ಕಲ್ ಈದ್ಗಾ ಜುಮಾ ಮಸೀದಿಯ ಝತೀಬ್ ಯಾಕೂಬ್ ಮದನಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಯಾಕೂಬ್ ಇಡ್ಯಾ ವಹಿಸಿದ್ದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ಡಿವಿಜನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸುರತ್ಕಲ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುರತ್ಕಲ್ ವಲಯಾಧ್ಯಕ್ಷ ರಫೀಕ್ ಕುಳಾಯಿ, ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ನೂರುಲ್ಲ ಕುಳಾಯಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಪ್ರಾಧನ ಕಾರ್ಯದರ್ಶಿ ಕಾದರ್ ಕುಳಾಯಿ, ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿಯ ರಕ್ತ ನಿಧಿಯ ಅಧಿಕಾರಿ ಡಾ. ಚಾರೂ ಮತ್ತಿತರರು ಉಪಸ್ಥಿತರಿದ್ದರು.