ಫೆ.7ರಿಂದ 11: 34ನೆ ವಾರ್ಷಿಕ ಬೊಳ್ಳೂರು ದಫ್ ರಾತೀಬ್
ಮುಲ್ಕಿ, ಫೆ.6: ಮುಹಿಯುದ್ದೀನ್ ಜುಮಾ ಮಸೀದಿ ಬೊಳ್ಳೂರು, ಲಿಯಾವುಲ್ ಇಸ್ಲಾಂ ದಫ್ ಕಮೀಟಿ ಇದರ 34ನೆ ವಾರ್ಷಿಕೋತ್ಸವ ಶೈಖುನಾ ಮಶಾಯಿಕ್ ಸುಲ್ತನುಲ್ ಆರಿಫೀನ್ ಅಶೈಖ್ ಅಹ್ಮದುಲ್ ಖಬೀರ್ ರಿಪಾಯ್ಯಿ ಅವರ ಅನುಸ್ಮರಣೆಯ ದಫ್ ರಾತೀಬ್ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವು ಫೆ.7 ರಿಂದ 11ರ ವರೆಗೆ ನಡೆಯಲಿದೆ.
ಪೆ.7ರಂದು ಧ್ಜಜರೋಹಣ, ನೂತನ ಕಟ್ಟದ ಉದ್ಘಾಟನೆಯನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್‌ಹಾಜಿ ಮುಹಮ್ಮದ್ ಅಝ್‌ಹರ್ ಪೈಝಿ ನೆರವೇರಿಸಲಿದ್ದಾರೆ. ಕೆ.ಐ. ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಫೆ.8ರಂದು ಕಾಸರಗೋಡಿನ ಕೆ.ಎಂ.ಅಬ್ದುಲ್ ಅಝೀಝ್ ದಾರಿಮಿ, ಫೆ.9ರಂದು ಝೂಬೈರ್ ದಾರಿಮಿ, ಫೆ.10ರಂದು ಪಾಣತ್ತೂರಿನ ಅಬ್ದುಲ್ ಅಝೀಝ್ ಅಶ್ರಫಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ಫೆ.11ರಂದು ನಡೆಯುವ ಸಮಾರೋಪ ಸಮಾರಂಭವನ್ನು ಮಂಗಳೂರು ಖಾಝಿ ಶೈಖೂನಾ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ಉದ್ಘಾಟಿಸಲಿದ್ದಾರೆ.
ಸಜಿಪ ಕೇಂದ್ರ ಜುಮಾ ಮಸೀದಿಯ ಝತೀಬ್ ಅಶ್ಫಾಕ್ ಪೈಝಿ ಮುಖ್ಯ ಪಭಾಷಣ ಗೈಯಲ್ಲಿದ್ದು, ಶೈಖುನಾ ಅಸೈಯ್ಯದ್ ನಜ್‌ಮುದ್ದೀನ್ ಪೂಕೋಯ ತಜ್ಞಳ್ ದುವಾ ಆಶೀರ್ವಚನ ಗೈಯಲಿದ್ದಾರೆ. ಅರಣ್ಯ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕರಾದ ಕೆ.ಅಭಯಚಂದ್ರ ಜೈನ್, ಇನಾಯತ್ ಆಲಿ ಮುಲ್ಕಿ, ಹಾಜೀ ಪಂಡಿತ್ ಇದಿನಬ್ಬ ತೋಡಾರು, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್, ಇಂದಿರಾ ನಗರ ಸದರ್ ಮುಲ್ಲಿಮ್ ಹನೀಫ್ ದಾರಿಮಿ ಅಂಕೋಲಾ, ಚಂದ್ರಶೇಖರ ನಾನಿಲ್ ಮತ್ತಿತರರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿಶೇಷವಾಗಿ ಬೊಳ್ಳೂರು ಮಸೀದಿಯಲ್ಲಿ ಕಳೆದ ಹಲವು ದಶಕಗಳಿಂದ ಖತೀಬರಾಗಿ ಕೆಲಸ ನಿರ್ವಹಿಸುತ್ತಿರುವ ಮುಹಮ್ಮದ್ ಅಝ್‌ಹರ್ ಪೈಝಿ ಬೊಳ್ಳೂರು ಉಸ್ತಾದ್, ರಾಜ್ಯ ಅಲ್ಪ ಸಂಕ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಪೂರ್, ಮೂಡಾ ಸದಸ್ಯ ಎಚ್.ವಸಂತ ಬೆರ್ನಾಡ್, ಬೊಳ್ಳೂರು ಮಸೀದಿಯ ಮಾಜೀ ಪ್ರ. ಕಾರ್ಯದರ್ಶಿ ಅಬ್ದುಲ್ ಖಾದರ್, ಜಮಾತ್‌ನ ಹಿರಿಯ ಸದಸ್ಯ ಹಸೈನಾಕ ಪಳ್ಳಿ ಗುಡ್ಡೆ, ಅಹ್ಮದ್ ರವೂಫ್ ಸಖಾಫಿ, ಮುಹಮ್ಮದ್ ಇಸ್ಮಾಯಿಲ್ ಹಾಪಿಲ್‌ರನ್ನು ಸಮ್ಮಾನಿಸಲಾಗುವುದು.