ಕಳವು ಪ್ರಕರಣ: 2.87 ಲಕ್ಷ ರೂ.ಮೌಲ್ಯದ ಸೊತ್ತು ವಶ, ಇಬ್ಬರ ಬಂಧನ

Update: 2017-02-06 17:03 GMT

ಮಂಗಳೂರು, ಫೆ. 6: ಶತ್ತಿನಗರ ಪ್ರೀತಿನಗರದಲ್ಲಿರುವ ಸಂಸ್ಥೆಯ ಕಚೇರಿಯೊಂದರಿಂದ ಕಳ್ಳತನ ಮಾಡಲಾಗಿದ್ದ 2,87,500ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಸ್ಸಾಂ ನಿವಾಸಿಗಳಾದ ರಂಜನ್ (22) ಹಾಗೂ ಶಿವಶಂಕರ್‌ದಾಸ್ (23) ಎಂದು ಗುರುತಿಸಲಾಗಿದೆ.

 ಕೆಲವು ತಿಂಗಳ ಹಿಂದೆ ಇದೇ ಸಂಸ್ಥೆಯ ಚೇರಿಯ ಹೊರಭಾಗದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಂಜನ್ ಬಳಿಕ ಅಲ್ಲಿಂದ ಕೆಲಸ ಬಿಟ್ಟಿದ್ದ. 2016ರ ಡಿ.25ರಂದು ಆರೋಪಿಗಳು ಒಟ್ಟು 3,05,500ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಪ್ರಾರಂಭಿಸಿದ ಕಂಕನಾಡಿ ಪೊಲೀಸರು ಕಂಕನಾಡಿ ರೈಲ್ವೇ ನಿಲ್ದಾಣದ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 4 ಲ್ಯಾಪ್‌ಟಾಪ್, 5 ಐಪ್ಯಾಡ್, 1 ಕ್ಯಾಮೆರಾ, 1 ವಾಚ್ ಸೇರಿ 2,87,500ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಚಂದ್ರಶೇಖರ್, ಡಿಸಿಪಿಗಳಾದ ಡಾ.ಸಂಜೀವ ಪಾಟೀಲ್, ಕೆ.ಎಂ. ಶಾಂತರಾಜು ಹಾಗೂ ಎಸಿಪಿ ಶೃತಿ ಅವರ ಮಾರ್ಗದರ್ಶನದಲ್ಲಿ ಕಂಕನಾಡಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರವಿ ನಾಯ್ಕ್, ಪಿಎಸ್‌ಐ ಶಂಕರ್ ಪಾಟಳಿ, ಎಎಸ್‌ಐ ಗಿಲ್ಬರ್ಟ್, ಎಚ್‌ಸಿಗಳಾದ ವಿನೋದ್, ಮದನ್, ರಘುವೀರ್, ಸಂತೋಷ್, ಸತೀಶ್ ಹಾಗೂ ಹೋಂಗಾರ್ಡ್ ನಿತೇಶ್ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News