ಯುವತಿ ನಾಪತ್ತೆ

Update: 2017-02-06 17:05 GMT

ಮಂಗಳೂರು, ಫೆ. 6: ಕಾವೂರು ಗಾಂಧಿನಗರ ದೋಟ ಎಂಬಲ್ಲಿನ ನಿವಾಸಿ ತಿಮ್ಮಪ್ಪ ಪೂಜಾರಿ ಎಂಬವರ ಪುತ್ರಿ ಸುಶ್ಮಿತಾ (29) ಎಂಬವರು ಕಾಣೆಯಾಗಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಸುಶ್ಮಿತಾ ಎಂದಿನಂತೆ ಜ. 31ರಂದು ಬೆಳಗ್ಗೆ 9:30ಕ್ಕೆ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯ ಬಳಿಯಲ್ಲಿರುವ ಲೇಡೀಸ್ ಬ್ಯೂಟಿ ಪಾರ್ಲರ್‌ಗೆ ಕೆಲಸಕ್ಕೆ ಹೋದವರು ರಾತ್ರಿವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ ಎಂದು ತಿಮ್ಮಪ್ಪ ಅವರ ಸಹೋದರ ಮಾಧವ ಪೂಜಾರಿ ಎಂಬವರು ದೂರು ನೀಡಿದ್ದಾರೆ.

ಸುಶ್ಮಿತಾ 5.3 ಅಡಿ ಎತ್ತರ, ಕೋಲುಮುಖ, ಸಾಧಾರಣ ಶರೀರ ಹೊಂದಿದ್ದು, ಬಿಳಿಬಣ್ಣದ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಪತ್ತೆಯಾದಲ್ಲಿ ಕಾವೂರು ಪೊಲೀಸ್ ಠಾಣೆ 0824-2220533, ಕಂಟ್ರೋಲ್ ರೂಂ 0824-2220800, 2220100 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕಾವೂರು ಪೊಲೀಸ್ ಠಾಣಾ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News