ಆದಾಯ ತೆರಿಗೆಯ ಬಗ್ಗೆ ಗಮನಹರಿಸಲಾದ ಬಜೆಟ್ : ಫಿರೋಜ್ ಬಿ.ಅಂಧ್ಯಾರುಜಿನ್
ಮಂಗಳೂರು,ಫೆ.6:ಕೇಂದ್ರ ಸರಕಾರದಿಂದ ಮಂಡಿಸಲಾದ ಈ ಬಾರಿಯ ಬಜೆಟ್ ಹೆಚ್ಚು ವಿವಾದಗಳಿಲ್ಲದ ಆದಾಯ ತೆರಿಗೆಯ ಬಗ್ಗೆ ಹೆಚ್ಚು ಗಮನಹರಿಸಲಾದ ಬಜೆಟ್ ಎನ್ನಬಹುದು ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಹಾಗೂ ಖ್ಯಾತ ತೆರಿಗೆ ವಿಶ್ಲೇಷಕರಾದ ಫಿರೋಜ್ ಬಿ.ಅಂಧ್ಯಾರುಜಿನ್ ತಿಳಿಸಿದ್ದಾರೆ.
ಲಕ್ಕಪರಿಶೋಧಕರ ಮಂಗಳೂರು ಘಟಕದ ವತಿಯಿಂದ ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ದಿ.ಕೆ.ಗಣೇಶ್ ಶೆಣೈ ಸ್ಮಾರಕ ಕೇಂದ್ರ ಬಜೆಟ್ -2017 ಕುರಿತ ಅವರು ಇಂದು ವಿಶೇಷ ಉಪನ್ಯಾಸ ನೀಡಿದರು.
ಈ ಬಾರಿಯ ಬಜೆಟ್‌ನಲ್ಲಿ ಗುರುತಿಸಲಾದ 150 ಅಂಶಗಳಲ್ಲಿ 88 ಆದಾಯ ತ್ಟರೆರಿಗೆಗೆ ಸಂಬಂಧಿಸಿದ್ದಾಗಿತ್ತು .ಪ್ರಥಮ ಬಾರಿಗೆ ಆದಾಯ ತೆರಿಗೆ ಪಾವತಿಸುವವರಿಗೆ ನೀಡಲಾದ ವಿನಾಯಿತಿಯನ್ನು ಇತರ ತೆರಿಗೆ ಪಾವತಿದಾರರಿಗೂ ನೀಡಬಹುದಿತ್ತು ಎಂದು ತಿಳಿಸಿದರು.ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರಿಗೆ ಪಡೆದುಕೊಳ್ಳುವ ವ್ಯವಸ್ಥೆ ಹೆಚ್ಚು ಉತ್ತಮವಾದುದು.ಆದಾಯ ತೆರಿಗೆಯ ಮಿತಿಯನ್ನು 3ಲಕ್ಷ ರೂವರೆಗೆ ಏರಿಸಿರುವುದು ಉತ್ತಮ ಆದರೆ ಆದಾಯ ತೆರಿಗೆಯ ಹಂತಗಳನ್ನು ಮಾಡಿದ ರೀತಿ ಸಮರ್ಪಕವಾಗಿಲ್ಲ ಮೂರು ಲಕ್ಷ ದಿಂದ 5ಲಕ್ಷದ ವರೆಗೆ ಶೇ 5 ತೆರಿಗೆ ಇಳಿಸಿ ಬಳಿಕ 5ರಿಂದ 10 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಶೇ 20 ತೆರಿಗೆ ವಿಧಿಸಿರುವ ಕ್ರಮ ಸಮರ್ಪಕವಲ್ಲ.ಶೇ 5ರಿಂದ ಇನ್ನೊಂದು ಹಂತ (ಸ್ಲಾಬ್)10ನ್ನು ಸಂಪೂರ್ಣ ಬಿಟ್ಟು ಏಕಾಏಕಿ 20ಕ್ಕೆ ಏರಿಸಲಾಗಿದೆ ಎಂದು ನ್ಯಾಯವಾದಿ ಫಿರೋಝ್ ತಿಳಿಸಿದರು.
ನೋಟು ನಿಷೇಧದ ಬಳಿಕ ನಡೆ:-ಸರಕಾರ ಕಳೆದ ನವೆಂಬರ್ 8ರಂದು ದೇಶದಲ್ಲಿ 500,ಹಾಗೂ 1000 ನೋಟುಗಳನ್ನು ನಿಷೇಧಿಸಿದ ನಡೆಯ ಬಗ್ಗೆ ಹಲವು ಗೊಂದಲಗಳು ಚರ್ಚೆಗಳು ಇನ್ನೂ ಮುಂದುವರಿದಿವೆ.ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೋಟನ್ನು ಅಮಾನ್ಯ ಗೊಳಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರಕಾರಕ್ಕಿದೆಯೇ,ಗ್ರಾಹಕರು ಬ್ಯಾಂಕಿನಲ್ಲಿ ಇರಿಸಿದ ಮೊತ್ತವನ್ನು ತೆಗೆಯಲು ನಿರ್ಬಂಧಿಸುವ ಅಧಿಕಾರ ಕೇಂದ್ರ ಸಕರಾಕ್ಕಿದೆಯೇ ಇದೆಯೇ ?ಅದು ಜನರ ಹಕ್ಕನ್ನು ಮೊಟಕುಗೊಳಿಸಿದಂತಾಗುವುದಿಲ್ಲವೇ? ನೋಟು ನಿಷೇಧದ ಬಳಿಕ ಸಹಕಾರಿ ಬ್ಯಾಂಕುಗಳ ತಮ್ಮ ಬಳಿ ಜಮಾವಣೆಯಾದ ಹಣವನ್ನು ಸ್ವೀಕರಿಸಲು ನಿರಾಕರಿಸಿರುವ ರಿಸರ್ವ್ ಬ್ಯಾಂಕ್‌ನ ಧೋರಣೆ ಚರ್ಚೆಗೆ ಕಾರಣವಾಗಿದೆ ಎಂದು ಫಿರೋಜ್ ಬಿ.ಅಂಧ್ಯಾರುಜಿನ್ ತಿಳಿಸಿದರು.
ಭಾರತದ ರಾಜಕೀಯಯ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ನೀಡುವುದನ್ನು ನಿರ್ಬಂಧಿಸಿರುವುದು ಆಡಳಿತದಲ್ಲಿ ಸ್ವಚ್ಛ ಭಾರತದ ದೃಷ್ಟಿಯಿಂದ ಪ್ರಮುಖ ಹೆಜ್ಜೆ ಯಾಗಿದೆ ಎಂದು ಫಿರೋಜ್ ಅಂಧ್ಯಾರುಜಿನ್ ತಿಳಿಸಿದರು.ಸಮಾರಂಭ ಅಧ್ಯಕ್ಷತೆಯನ್ನು ಲೆಕ್ಕಪರಿಶೋಧಕರ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಕೇಶವ ಎನ್.ಬಲ್ಲೂಕರಾಯ ವಹಿಸಿದ್ದರು.