×
Ad

ಬೆಳ್ಮಣ್: ರಾಷ್ಟ್ರ, ರಾಜ್ಯ ಕ್ರೀಡಾ ಸಾಧಕರಿಗೆ ಸನ್ಮಾನ

Update: 2017-02-06 22:53 IST

ಬೆಳ್ಮಣ್, ಫೆ.6:ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ಸ್ಫರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕಾರ್ಕಳ ತಾಲೂಕಿನ ಕ್ರೀಡಾಪಟುಗಳನ್ನು ಬೆಳ್ಮಣ್ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಜರುಗಿದ ತಾಲೂಕು ದೈಹಿಕ ಶಿಕ್ಷಕರ ಸಂಘದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

   ಕಾರ್ಕಳ ಎಸ್‌ವಿಟಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ, ಪವಿತ್ರಾ, ಪ್ರಜ್ಞಾ, ಅಶ್ವಿನಿ, ಗೌತಮಿ, ಪ್ರಜ್ಞಾ ಎಸ್., ಸಾಕ್ಷಿತ್, ಪ್ರತೀಕ್ಷಾ, ಸರಕಾರಿ ಪ.ಪೂ. ಕಾಲೇಜು ಶಿರ್ಲಾಲಿನ ಕುಸುಮಾ, ಸರಕಾರಿ ಫ್ರೌಢ ಶಾಲೆ ಹೊಸ್ಮಾರುನ ಶಮನ್ ಶೆಟ್ಟಿ, ಜ್ಞಾನಸುಧಾ ಪ.ಪೂ.ಕಾಲೇಜು ಕಾರ್ಕಳದ ಪ್ರತ್ಯಕ್ಷ ಕುಮಾರ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಿಯಾರು ದಿನೇಶ್, ಕಾರ್ಕಳ ಎಸ್‌ಎನ್‌ವಿ ಪ್ರೌಢ ಶಾಲೆಯ ಶ್ರೇಯಾ ಡಿ.ಶೆಟ್ಟಿ, ಅಖಿಲಾ, ಶ್ರೀಕಾಂತ್ ಶೆಣೈ, ಶಶಾಂಕ್ ಜೆ. ಶೆಟ್ಟಿ, ಗೋವಿಂದ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಬೆಳ್ಮಣ್ ಸಂತ ಜೋಸೆಫ್ ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂ.ಜೋಸ್ವಿನ್ ಪ್ರವೀಣ್ ಡಿಸೋಜ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಮನ ಮೋಹನ ಎಚ್.ಕೆ., ಹಿರಿಯ ಕ್ರೀಡಾಪಟು, ನಂದಳಿಕೆ ಚಾವಡಿ ಅರಮನೆಯ ಎನ್.ಸುಹಾಸ್ ಹೆಗ್ಡೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಸ್.ಸಿದ್ಧಪ್ಪ, ತಾಲೂಕು ಸಂಘದ ಅಧ್ಯಕ್ಷ ಹರಿದಾಸ್ ಪ್ರಭು, ಅಕ್ಷರ ದಾಸೋಹ/ಕ್ಷೇತ್ರ ಸಮನ್ವಯ ಅಧಿಕಾರಿ ಟಿ.ಬಾಸ್ಕರ್, ಪದಾಧಿಕಾರಿಗಳಾದ ರಿತೇಶ್ ಶೆಟ್ಟಿ ಸೂಡ, ಆನಂದ ಶೆಟ್ಟಿ ಪಳ್ಳಿ, ಶಾಲಾ ಮುಖ್ಯ ಶಿಕ್ಷಕಿ ಅನಿತಾ ಕುಲಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News