×
Ad

ದರೋಡೆ ಪ್ರಕರಣ: ಇಬ್ಬರ ಬಂಧನ

Update: 2017-02-06 22:59 IST

ಮಂಜೇಶ್ವರ,ಫೆ.6 : ಮಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಜೋಡುಕಲ್ಲು ನಿವಾಸಿಯೋರ್ವನನ್ನು ಚಾಕು ತೋರಿಸಿ ಬೆದರಿಸಿ ಕಾರಿನಲ್ಲಿ ಅಪಹರಿಸಿ 43000 ರೂ ದರೋಡೆಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಎಸ್.ಐ ಪ್ರಮೋದ್ ನೇತೃತ್ವದ ಪೋಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಪ್ಪಳ ಕೈಕಂಬದ ಅರಫಾತ್ತ್(19) , ಉಪ್ಪಳ ಮೂಸೋಡಿಯ ಮುಹಮ್ಮದ್ ನಿಸಾರ್(18) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ನಾಲ್ವರ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

5 ದಿವಸಗಳ ಹಿಂದೆ  ಜೋಡುಕಲ್ಲಿನ ಪ್ರೇಂ ಶೆಟ್ಟಿ ಎಂಬವರನ್ನು ಚಾಕು ತೋರಿಸಿ ಬೆದರಿಸಿ ಕಾರಿನಲ್ಲಿ ಅಪಹರಿಸಿ 43000 ರೂ ದರೋಡೆಗೈಯ್ಯಲಾಗಿತ್ತು. ಈ ಬಗ್ಗೆ ಪ್ರೇಂ ಶೆಟ್ಟಿ ನೀಡಿದ ದೂರಿನಲ್ಲಿ ಮಂಜೇಶ್ವರ ಪೋಳಿಸರು ಕೇಸು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News