×
Ad

ಕಾರ್ಖಾನೆ ಕಪ್ಪು ಮಸಿಯಿಂದ ಕೃಷಿಗೆ ಹಾನಿ : ಪರಿಶೀಲನೆ

Update: 2017-02-06 23:31 IST

ಮುಲ್ಕಿ, ಫೆ.6: ಇಲ್ಲಿಗೆ ಸಮೀಪದ ಕಾರ್ನಾಡು ಧರ್ಮಸ್ಥಾನ ಹಾಗೂ ಚಿತ್ರಾಪು ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಎಕರೆಗಟ್ಟಲೆ ಕೃಷಿತೋಟಕ್ಕೆ ಕಾರ್ಖಾನೆಗಳಿಂದ ಹೊರಸೂಸುವ ಕಪ್ಪಗಿನ ಕರಿಯಿಂದ ಭಾರೀ ಹಾನಿಯಾಗಿದ್ದು ಅನೇಕ ತೆಂಗಿನ ಮರಗಳು ಆಹುತಿಯಾದ ಪ್ರದೇಶಕ್ಕೆ ಮುಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ, ಉಪಾಧ್ಯಕ್ಷೆ ರಾಧಿಕಾ ಹಾಗೂ ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲದೆ, ಮುಲ್ಕಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಯಾಚರಿಸುತ್ತಿರುವ ಕಪ್ಪು ಮಸಿ ಉಗುಳುವ ಕಾರ್ಖಾನೆಗೆ ದಾಳಿ ನಡೆಸಿ ಮಾದರಿ ಸಂಗ್ರಹಿಸಿದ್ದಾರೆ.

   ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ, ಕಳೆದ ಕೆಲ ದಿನಗಳಿಂದ ಕಾರ್ನಾಡು ಹಾಗೂ ಚಿತ್ರಾಪು ಪರಿಸರದಲ್ಲಿ ಕಾರ್ಖಾನೆಯಿಂದ ಹೊರ ಸೂಸುವ ಕರಿಯ ರೂಪದ ವಸ್ತು ಪರಿಸರದಲ್ಲಿ ಹರಡಿದ ಪರಿಣಾಮ ಎಕರೆಗಟ್ಟಲೆ ಕೃಷಿಗೆ ಹಾನಿಯಾಗಿದೆ. ಕಾರ್ಖಾಬನೆ ಹೊರ ಸೂಸುತ್ತಿರುವ ಮಸಿಯನ್ನು ಪ್ರಯೋಗಾಲಯಕ್ಕೆ ರವಾನಿಸಿ ಪರಿಶೀಲಿಸಲಾಗುವುದು. ವರಿದಯ ಬಳಿಕ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಕೃಷಿಕರಲ್ಲಿ ಆತಂಕ...:

ಕಾರ್ನಾಡು ಹಾಗೂ ಚಿತ್ರಾಪು ಪರಿಸರದಲ್ಲಿ ಕೃಷಿಗೆ ಹಾನಿಯಾಗಿರುವ ಬಗ್ಗೆ ಸ್ಥಳೀಯ ಕೃಷಿಕರು ತೀವ್ರ ಆತಂಕ ವ್ಯಕ್ತ ಪಡಿಸಿದ್ದು, ಕಾರ್ಖಾನೆಗಳ ಮಾಲಕರ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರೈತರೊಂದಿಗೆ ಕಂಪೆನಿಗಳ ಚೆಲ್ಲಾಟ ಬೇಡ. ಕೂಡಲೇ ಪರಿಸರ ಇಲಾಖೆ ಎಚ್ಚೆತ್ತುಕೊಂಡು ತ್ಯಾಜ್ಯ ಹೊರಸೂಸುವ ಕಾರ್ಖಾನೆಗಳಿಗೆ ನೋಟಿಸು ಜಾರಿಗೊಳಿಸಬೇಕು. ಇಲ್ಲದಿದ್ದರೆ ಪರಿಸರ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಗುವುದು.

ಪುತ್ತು ಬಾವು, ಮುಲ್ಕಿ ನಗರ ಪಂಚಾಯತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News