ಈಜಿಪ್ಟ್: 100ಕ್ಕೂ ಹೆಚ್ಚು ಪತ್ರಕರ್ತರ ಬಂಧನ
Update: 2017-02-07 12:27 IST
ಕೈರೊ,ಫೆ.7: ಈಜಿಪ್ಟ್‌ನಲ್ಲಿ 2013ರಲ್ಲಿ ನಡೆದ ಸೇನಾ ಬುಡಮೇಲು ಕೃತ್ಯದ ಬಳಿಕ 100ಕ್ಕೂ ಅಧಿಕ ಪತ್ರಕರ್ತರು ಬಂಧಿಸಲ್ಪಟ್ಟಿದ್ದಾರೆ. ವಿವಿಧ ಕಾನೂನು ಉಲ್ಲಂಘನೆಯನ್ನು ಸೂಚಿಸಿ ಈ ಬಂಧನ ನಡೆದಿದೆ ಎಂದು ಅರಬ್ ಮೀಡಿಯ ಫ್ರೀಡಂ ಮಾನಿಟರ್ ಎನ್ನುವ ಸಂಘಟನೆ ತಿಳಿಸಿದೆ.
ಬಂಧಿಸಲ್ಪಟ್ಟ ಪತ್ರಕರ್ತರಲ್ಲಿ ಮೂವತ್ತು ಮಂದಿಯ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ. ಇವರ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. ಕಳೆದ ತಿಂಗಳು ಈಜಿಪ್ಟ್‌ನಲ್ಲಿ ಪತ್ರಕರ್ತರ ವಿರುದ್ಧ 112 ಕೊಲೆಪ್ರಯತ್ನದ ಘಟನೆಗಳು ನಡೆದಿವೆ. ಈ ಅವಧಿಯಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಅರಬ್ ಮೀಡಿಯ ಫ್ರೀಡಂ ಮಾನಿಟರ್ ತಿಳಿಸಿದೆ.