ಬಂಟ್ವಾಳ: ಅಮಲು ಮುಕ್ತ ಸಮಾಜ ನಿರ್ಮಾಣ ಮಾಹಿತಿ ಕಾರ್ಯಗಾರ
Update: 2017-02-07 13:36 IST
ಬಿ.ಸಿ.ರೋಡ್ ಬಂಟ್ವಾಳ, ಫೆ. 7: ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಕೈಕಂಬ ಬಿ.ಸಿ.ರೋಡು ಮತ್ತು ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಮಂಗಳೂರು ಇದರ ಜಂಟಿ ಅಶ್ರಯದಲ್ಲಿ ಉಲಮಾಗಳಿಗೆ ಅಮಲು ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ಬಿ.ಸಿ.ರೋಡು ಸೇವಾ ಮಂದಿರದಲ್ಲಿ ನಡೆಯಿತು.
ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಕೆ.ಎಂ.ಶರೀಫ್, ಮನೋರೋಗ ತಙ್ಞ ಡಾ. ಕೆರೊಲಿನ್ ಪಿ. ಡಿಸೋಜ ಅಮಲು ಪದಾರ್ಥ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಅಮಲು ಸೇವನೆ ಕುರಿತು ಇಸ್ಲಾಮಿನ ವಿಧಿವಿಧಾನಗಳ ಬಗ್ಗೆ ಹಾಜಿ ಇಬ್ರಾಹೀಂ ಬಾಖವಿ ಕೆ.ಸಿ.ರೋಡು ಮಾಹಿತಿ ನೀಡಿದರು.
ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವಿಕ ನುಡಿಗಳಾನ್ನಾಡಿದರು. ಈ ಸಂದರ್ಭದಲ್ಲಿ ಮುಬಾರಕ್, ಕೂರ್ನಡ್ಕ ಜುಮಾ ಮಸೀದಿ ಖತೀಬ್ ಸಿದ್ದೀಕ್ ಅಲ್ ಜಲಾಲಿ ಉಪಸ್ಥಿತರಿದರು.