ಬಂಟ್ವಾಳ: ರೇಂಜ್ ಮಟ್ಟದ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಮೇಳ
ಬಂಟ್ವಾಳ, ಫೆ.7: ತಾಲೂಕು ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಹಾಗೂ ಮದರಸಾ ಮೆನೇಜ್ ಮೆಂಟ್ ಆಶ್ರಯದಲ್ಲಿ ರೇಂಜ್ ಮಟ್ಟದ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಮೇಳ - 2017 ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆಯು ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬಂಟ್ವಾಳ ಕೆಲಗಿನಪೇಟೆ ತೌಹೀದ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಬಂಟ್ವಾಳ ಮಸೀದಿಯ ಖತೀಬರಾದ ಅನ್ಸಾರ್ ಫೈಝಿ ಮುಖ್ಯ ಪ್ರಭಾಷಣಗೈದರು. ಜಬ್ಬಾರ್ ಉಸ್ತಾದ್ ಮತ್ತು ಮುಫತ್ತಿಸ್ ಕಾಸಿಂ ಮಸ್ಲಿಯಾರ್‌ರವರನ್ನು ಸನ್ಮಾನಿಸಲಾಯಿತು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಅಬ್ದುಲ್ ಖಾದರ್, ರೇಂಜ್ ಅಧ್ಯಕ್ಷ ಪಾಂಡವರಕಲ್ಲು ಸದರ್ ಮುಅಲ್ಲಿಂ ಜಿ.ವೈ.ಅಬ್ದುಲ್ ರಝಾಕ್ ಮೌಲವಿ ಗೇರುಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ.ಯಹ್ಯಾ ಮೌಲವಿ, ಸಿದ್ದೀಕ್ ರಹ್ಮಾನಿ, ಬಂಟ್ವಾಳ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಮದರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಮಾಸ್ಟರ್, ಪ್ರಧಾನ ಕಾರ್ಯದರ್ಶಿ ಬಿ.ಎ.ಮುಹಮ್ಮದ್ ಹಾಜಿ, ರೇಂಜ್ ಮಾಜಿ ಕೋಶಾಧಿಕಾರಿ ಸುಲೈಮಾನ್ ಹೆದ್ದಾರಿ, ತೌಹೀದ್ ಶಾಲಾ ಅಧ್ಯಕ್ಷ ಬಿ.ಎ.ಸುಲೈಮಾನ್ ಹಾಜಿ, ಸಂಚಾಲಕ ಹಾಜಿ ಮುಹಮ್ಮದ್ ಅಲಿ, ಪುರಸಭಾ ಸದಸ್ಯ ಮುನೀಶ್ ಅಲಿ, ಇಬ್ರಾಹೀಂ ಹಾಜಿ, ಪಿಟಿಎ ಅಧ್ಯಕ್ಷ ಶಬೀರ್, ಪಾಂಡವರಕಲ್ಲು ಮಸೀದಿ ಅಧ್ಯಕ್ಷ ಕೆ.ಜಿ.ಎನ್.ಪುತ್ತುಮೋನು, ಬಂಟ್ವಾಳ ಶಾಖೆ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಎ.ಮುಹಮ್ಮದ್ ಇಕ್ಬಾಲ್, ರೇಂಜ್‌ಗೊಳಪಟ್ಟ ಎಲ್ಲ ಮದರಸ ಅಧ್ಯಾಪಕರು, ಮೆನೇಜ್‌ಮೆಂಟ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ತೀರ್ಪುಗಾರರಾಗಿ ಸಾಲ್ಮರ ಉಮರ್ ದಾರಿಮಿ ಭಾಗವಹಿಸಿದರು. ಮುನೀರ್ ಅರ್ಷದಿ ಕಿರಾಅತ್ ಪಠಿಸಿದರು. ಹನೀಫ್ ಫೈಝಿ ಸ್ವಾಗತಿಸಿದರು. ಹಮೀದ್ ದಾರಿಮಿ, ಉಸ್ಮಾನ್ ಮೌಲವಿ, ಇಬ್ರಾಹೀಂ ಬಾತಿಷ್ ಕಾರ್ಯಕ್ರಮ ನಿರೂಪಿಸಿದರು.