ಮೂಡುಬಿದಿರೆ: ಪಂಚಮಿ ಮಾರೂರಿಗೆ ಅದ್ಧೂರಿ ಸ್ವಾಗತ, ಸನ್ಮಾನ
Update: 2017-02-07 15:45 IST
ಮೂಡುಬಿದಿರೆ, ಫೆ.7: ಎನ್‌ಸಿಸಿಯ ಭೂದಳ ವಿಭಾಗದಿಂದ ದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿ ತವರಿಗೆ ಆಗಮಿಸಿದ ಮೂಡಬಿದಿರೆ ಜೈನ ಪ್ರೌಡಶಾಲೆಯ 9ನೆ ತರಗತಿ ವಿದ್ಯಾರ್ಥಿನಿ, ರಾಷ್ರ್ಟಪ್ರಶಸ್ತಿ ವಿಜೇತೆ ಪಂಚಮಿ ಮಾರೂರು ಅವರಿಗೆ ಶಾಲೆಯ ವತಿಯಿಂದ ಭವ್ಯ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ ಹಾಗೂ ಎನ್‌ಸಿಸಿ ಮಾರ್ಗದರ್ಶಕ ನವೀನ್, ಕಾಂಚನಶ್ರೀ, ಸುಧಾ ಹಾಗೂ ಶ್ಯಾಮ ಪ್ರಸಾದ್, ಪಂಚಮಿಯ ಪೋಷಕರಾದ ಪಾರ್ಶ್ವನಾಥ ಮತ್ತು ದೀಪಾಶ್ರೀಯವರು ಉಪಸ್ಥಿತರಿದ್ದರು.