ಏಕಪಾತ್ರಾಭಿನಯದಲ್ಲಿ ಕಾವ್ಯಶ್ರೀ ಚಿದ್ಗಲ್ ರಾಜ್ಯ ಮಟ್ಟಕ್ಕೆ ಆಯ್ಕೆ
Update: 2017-02-07 15:50 IST
ಪುತ್ತೂರು, ಫೆ.7: ಮಂಡ್ಯದಲ್ಲಿ ನಡೆದ 2016-17ನೆ ಸಾಲಿನ ಮೈಸೂರು ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಪದ್ಮಶ್ರೀ ಯುವತಿ ಮಂಡಲ ಸವಣೂರು ಇದರ ಸದಸ್ಯೆ ಕಾವ್ಯಶ್ರೀ ಚಿದ್ಗಲ್ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ನಿವಾಸಿಯಾಗಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ನಾರಾಯಣ ಗೌಡ ಹಾಗೂ ಶಶಿಪ್ರಭಾ ದಂಪತಿಯ ಪುತ್ರಿಯಾಗಿದ್ದಾರೆ.