ಚಾರ್ಮಾಡಿ: ಫೆ.8ರಂದು 28ನೆ ಖುತುಬಿಯತ್ ವಾರ್ಷಿಕೋತ್ಸವ ಸಮಾರೋಪ
ಚಾರ್ಮಾಡಿ, ಫೆ.7: ಜಲಾಲಿಯ ನಗರ ಮುಹಯ್ಯದ್ದೀನ್ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ 28ನೆ ಖುತುಬಿಯತ್ ವಾರ್ಷಿಕೋತ್ಸವ ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಶೈಖುನಾ ಕೆ.ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಇವರಿಗೆ ಸನ್ಮಾನ ಕಾರ್ಯಕ್ರಮವು ಫೆ.8ರಂದು ಅಸರ್ ನಮಾಝಿನ ಬಳಿಕ ನಡೆಯಲಿದೆ.
ಸಂಜೆ ಗಂಟೆ 7ಕ್ಕೆ ನಡೆಯುವ ದಾರ್ಮಿಕ ಕಾರ್ಯಕ್ರಮದಲ್ಲಿ ಆನೆಕಲ್ಲು ಮಸೀದಿ ಖತೀಬರಾದ ಅಸ್ಸಯ್ಯದ್ ಇಬ್ರಾಹಿಂ ಬಾತಿಷ್ ತಂಙಳ್ ಅಲ್ ಬುಖಾರಿ ಅಲ್ ಅಝ್ಝರಿ ಮುಖ್ಯ ಪ್ರಭಾಷಣ ಹಾಗೂ ದುವಾ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಜಲಾಲಿಯ ನಗರ ಎಂ.ಜಿ.ಎಂ ಅಧ್ಯಕ್ಷ ಸಿ.ಎಚ್ ಮುಹಮ್ಮದ್ ಉತ್ತಿನಡ್ಕ ಇವರು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಎಂ.ಜಿ.ಎಂ ಕಕ್ಕಿಂಜೆ ಖತೀಬರಾದ ಇ.ಕೆ ಮೂಸಾದಾರಿಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಕಲ್ಲಡ, ಅಹ್ಮದ್ ಟಿ.ಬಿ ರಸ್ತೆ, ಅಬ್ದುಲ್ ಖಾದರ್ ಫಾಲ್ಕಾನ್, ಅಬ್ಬಾಸ್ ಪೈಝಿ, ಅಹ್ಮದ್ ಕುಂಞ ಯುಸ್ಲಿಯಾರ್ ಟಿ.ಬಿ.ರಸ್ತೆ, ಎಂ.ಯು ಫಾರೂಕ ಮಾಚಾರ್, ಸಂಶೀರ್ ಹಲಸಿನಡಿ ಹಾಗೂ ಸುಲೈಮಾನ್ ಟಿ.ಬಿ. ರಸ್ತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮೂಸಾಕುಂಞ.ಬಿ. ಚಾರ್ಮಾಡಿ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ.