ನಿವೇಶನ ಮೀಸಲು ಜಮೀನು ಒತ್ತುವರಿ ತೆಎರವಿಗೆ ಒತ್ತಾಯಿಸಿ ಪ್ರತಿಭಟನೆ
ಮೂಡಿಗೆರೆ, ಫೆ.7: ಮಾಜಿ ತಾಪಂ ಅಧ್ಯಕ್ಷರೋರ್ವರು ಒತ್ತುವರಿ ಮಾಡಿಕೊಂಡಿರುವನಿವೇಶನಕ್ಕೆಂದು ಮೀಸಲಿರಿಸಿದ್ದ ಜಮೀನನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಬಿದರಹಳ್ಳಿ ಗ್ರಾಪಂ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಜಯಪಾಲ್ ಮಾತನಾಡಿ, ಬಿದರಹಳ್ಳಿ ಸ.ನಂ.118 ರಲ್ಲಿ 3 ಎಕರೆ ರಕಾರಿ ಗೋಮಾಳವನ್ನು ಪ.ಜಾತಿಯ ನಿವೇಶನ ರಹಿತರಿಗೆ ನಿೇಶನ ಒದಗಿಸಲು 2004ರಲ್ಲಿ ಗ್ರಾಪಂ150 ನಿವೇನಗಳನ್ನು ಮಂಜೂರು ಮಾಡಿರ.ಅದರಲ್ಲಿ 67 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ ನಿವೇಶನಗಳು ಹಾಗೆಯೆ ಉಳಿದಿವೆ. ಹಂಚಿಕೆ ಮಾಡಲಾದ ನಿವೇಶನಗಳು ಪಾರದರ್ಶಕವಾಗಿಲ್ಲ. ಒಂದೇ ಮನೆಗೆ ಸೇರಿದ ಸದಸ್ಯರಿಗೆ ನಾಲ್ಕೈದು ನಿವೆೀಶನಗಳನ್ನು ನೀಡಲಾಗಿದೆ. ಗ್ರಾಮಸ್ಥರಲ್ಲದವರಿಗೂ ಕೂಡ ಕೆಲವರಿಗೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಕೆಲ ದಿನಗಳ ಹಿಂದೆ ಮಾಜಿ ತಾ.ಪಂ. ಅಧ್ಯಕ್ಷರೋರ್ವರು ನಿವೇಶನಕ್ಕೆಂದು ಮೀಸಲಿಟ್ಟ 1 ಎಕರೆ ಜಮೀನಿಗೆ ಬೇಲಿ ನಿರ್ಮಿಸಿ ಒತ್ತುವರಿಮಾಡಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಗ್ರಾಪಂ ಗೆ ವಿಷಯ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ.ಜಾತಿಗೆ ಮೀಸಲಾಗಿರುವ ನಿವೇಶನಗಳನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು. ಪ್ರಭಾವಿಗಳು ಹಾಕಿರುವ ಬೇಲಿಯ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಗ್ರಾಪಂಕಚೇರಿಗೆ ಬಿೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಈ ವೇಳೆ ಗ್ರಾಮಾಸ್ಥರಾದ ಅಜ್ಮಲ್, ಲೋಹಿತ್, ಮದನ, ಸುಧಾಕರ, ಮಹೇಶ್, ಪ್ರಕಾಶ್, ರವಿರಾಜು, ರಮೇಶ, ಸುರೇಶ, ಭವಾನಿ, ಭಾಗ್ಯ, ಪದ್ಮಾಕ್ಷಿ, ಸುಶೀಲಾ,ಪೂರ್ಣ, ರತ್ನ ಮತ್ತಿತರರಿದ್ದರು.