ಜಿಲ್ಲಾ ಸರ್ಜನ್ ವರ್ಗಾವಣೆ ರದ್ದತಿಗೆ ಒತ್ತಾಯಿಸಿ ಮನವಿ
ಚಿಕ್ಕಮಗಳೂರು, ಫೆ.7: ಜಿಲ್ಲಾ ಸರ್ಜನ್ ಡಾ. ಕುಮಾರ್ ನಾಯ್ಕ ವರ್ಗಾವಣೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು ಬಿಜೆಪಿ ಪ.ಜಾತಿ/ಪ.ವರ್ಗದ ಮೋರ್ಚಾ ಕಾರ್ಯಕರ್ತರು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲಾ ಸರ್ಜನ್ ಡಾ॥ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕುಮಾರನಾಯ್ಕ ಅವರನ್ನು ವರ್ಗಾವಣೆ ಮಾಡಿದಲ್ಲಿ ಬಡರೋಗಿಗಳಿಗೆ ತೊಂದರೆಯಾಗುತ್ತದೆ. ಅಧಿಕಾರ ವಹಿಸಿಕೊಂಡ ಒಂದು ವರ್ಷದ ಒಳಗೇ ಅವರನ್ನು ವರ್ಗಾವಣೆ ಮಾಡಿರುವುದರ ಹಿಂದೆ ಜನಪ್ರತಿನಿಧಿಗಳು ಮತ್ತು ಜಾತಿ ರಾಜಕೀಯದ ಹುನ್ನಾರವಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಕುಮಾರನಾಯ್ಕ ಅವರ ವರ್ಗಾವಣೆಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದ ಪದಾಧಿಕಾರಿಗಳು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಈ ಸಮಯದಲ್ಲಿ ಮೋರ್ಚಾದ ಜಿಲ್ಲಾ ವಕ್ತಾರ ನಂಜುಂಡಪ್ಪ, ನಗರಾಧ್ಯಕ್ಷ ರಾಜ್‌ಕುಮಾರ್ ತಾಲ್ಲೂಕು ಉಪಾಧ್ಯಕ್ಷ ನಲ್ಲೂರು ಜಯಣ್ಣ, ಉಪ್ಪಳ್ಳಿ ವಾರ್ಡ್‌ನ ಅಧ್ಯಕ್ಷ ರಾಜು, ಮಲ್ಲೇಶ್ ಹಾಜರಿದ್ದರು.