×
Ad

ಮೂಡಿಗೆರೆ: ಕಾಂಗ್ರೆಸ್‌ ನಿಂದ ಜೆಡಿಎಸ್ ಗೆ ಸೇರ್ಪಡೆ

Update: 2017-02-07 18:36 IST

ಮೂಡಿಗೆರೆ, ಫೆ.7: ಅಣಜೂರು ಮತ್ತು ಜನ್ನಾಪುರ ಭಾಗದ ಅನೇಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಝಕರಿಯ ಝಾಕೀರ್ ತಿಳಿಸಿದ್ದಾರೆ.

 ಅವರು ಅಣಜೂರಿನಲ್ಲಿ ನಡೆದ ಜೆಡಿಎಸ್ ಸೇರ್ಪಡೆ ಸರಳ ಕಾರ್ಯಕ್ರಮದಲ್ಲಿ ಮಾತನಾಡಿ, ಅಣಜೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಶರೀಫ್, ಹನೀಫ್, ರಿಯಾಝ್, ನಝೀರ್, ಮೋನಾಕ, ಕರೀಮ್, ಹಂಝ, ನಾಸಿರ್, ಹಾರಿಸ್ ಹೋಟೆಲ್, ಇಸ್ಮಾಯಿಲ್, ಲತೀಫ್, ಖಾಸಿಂ ಮತ್ತಿತರರು ಜೆಡಿಎಸ್ ಪಕ್ಷವನ್ನು ವಿದ್ಯುಕ್ತವಾಗಿ ಸೇರ್ಪಡೆಯಾಗಿದ್ದಾರೆ.

 ಜನ್ನಾಪುರಲ್ಲಿ ಹಮೀದ್, ಅಹ್ಮದ್, ಖಾದರ್, ಆಟೋ ಇಸ್ಲಾಯಿಲ್, ಅಝೀಝ್ ಮತ್ತಿತರರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಮಾತ್ರ ಅಲ್ಪಸಂಖ್ಯಾತರ ಬಗ್ಗೆ ಅತೀವ ಕಾಳಜಿ ಹೊಂದಿರುವ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಮುಸಲ್ಮಾನರು ನೂರಾರು ಸಂಖ್ಯೆಯಲ್ಲಿ ಜೆಡಿಎಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದು ಝಕರಿಯ ಝಾಕೀರ್ ತಿಳಿಸಿದ್ದಾರೆ.

 ಈ ಸಂದರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ನಗರ ಕಾರ್ಯದರ್ಶಿ ಸೈಯದ್ ರಿಝ್ವಾನ್, ಸೈಯ್ಯದ್ ಫಯಾಝ್ ಅಲಿ, ಜನ್ನಾಪುರ ಮಸೀದಿಯ ಅಧ್ಯಕ್ಷ ಖಾದರ್, ಅಣಜೂರು ಎ.ಪಿ.ಮಹಮ್ಮದ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News