ಯುವತಿಯನ್ನು ಮಂಚಕ್ಕೆ ಕರೆದ ಜೋತಿಷಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ
Update: 2017-02-07 19:28 IST
ಮಂಗಳೂರು, ಫೆ. 7: ಯುವತಿಯೊಬ್ಬಳನ್ನು ಗ್ರಹಚಾರ ದೋಷ ಸರಿಪಡಿಸಲು ಬ್ರಾಹ್ಮನ ಯುವಕನೊಂದಿಗೆ ಮಲಗಬೇಕು ಎಂದು ಸಲಹೆ ನೀಡಿ ತಲೆ ಮರೆಸಿಕೊಂಡಿರುವ ಜ್ಯೋತಿಷಿ ರಾಮಕೃಷ್ಣ ಶರ್ಮನು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ಸತ್ರ ನ್ಯಾಯಾಲಯವು ತಿರಸ್ಕರಿಸಿದೆ.
ಜ್ಯೋತಿಷಿ ರಾಮಕೃಷ್ಣ ಶರ್ಮನು ಜೋತಿಷ್ಯದಲ್ಲಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಧಿಸಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದ. ಈ ಸಂದರ್ಭದಲ್ಲಿ ಯುವತಿಯು ರಾಮಕೃಷ್ಣನು ತನಗೆ ಈ ರೀತಿ ಲೈಂಗಿಕ ಸಲಹೆ ನೀಡಿದ್ದ ಎಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅದಾಗುವಷ್ಟರಲ್ಲಿ ವಂಚನೆ ಪ್ರಕರಣದಿಂದ ಜಾಮೀನು ಪಡೆದ ಜೋತಿಷಿ ರಾಮಕೃಷ್ಣ ಶರ್ಮ ತಲೆಮರೆಸಿ ಕೊಂಡಿದ್ದನು. ಬಂಧನವನ್ನು ತಪ್ಪಿಸಲು ಆತ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ.