ಬೈಕ್ ಸುಟ್ಟ ಪ್ರಕರಣ : ಆರೋಪಿಯ ಬಂಧನ
Update: 2017-02-07 19:31 IST
ಸುಳ್ಯ, ಫೆ. 7: ಪುಣ್ಚತ್ತಾರು ಬಸ್ ನಿಲ್ದಾಣದ ಹಿಂಬಾಗದಲ್ಲಿ ನಿಲ್ಲಿಸಿದ್ದ ಬೈಕ್ ಸುಟ್ಟು ಹಾಕಿದ್ದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಕಾಣಿಯೂರಿನ ಪೈಕ ಮನೆ ಪರಮೇಶ್ವರ ಅವರ ಪುತ್ರ ದಯಾನಂದ(22) ಬಂಧಿತ ಆರೋಪಿ. ಜನವರಿ 1ರಂದು ರಾತ್ರಿ ಪೈಕ ಮನೆಯ ಕುಶಾಲಪ್ಪ ಗೌಡರ ಪುತ್ರ ಪಿ.ದಿನೇಶ್ ಅವರು ತಮ್ಮ ಬೈಕ್‌ನ್ನು ಪುಣ್ಚತ್ತಾರು ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿಲ್ಲಿಸಿದ್ದರು. ಇದನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದರು. ಖಚಿತ ಸುಳಿವಿನ ಮೇರೆಗೆ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ಆರೋಪಿ ದಯಾನಂದನನ್ನು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳ್ಳಾರೆ ಎಸ್‌ಐ ಚೆಲುವಯ್ಯ ಹಾಗೂ ಸಿಬ್ಬಂದಿ ನವೀನ್, ವಸಂತ, ದೇವರಾಜ್, ಬಾಲಕೃಷ್ಣ, ಉಮೇಶ್, ಪ್ರವೀಣ್ ಬಾರ್ಕಿ, ಗೃಹ ರಕ್ಷಕ ಸಿಬ್ಬಂದಿ ದೇವಿಪ್ರಸಾದ್, ಕೇಶವ, ಪೂವಮ್ಮ, ಅಶ್ವಿನಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.