ಫೆ. 9-18: ಮಂಜನಾಡಿ ಊರುಸ್

Update: 2017-02-07 14:57 GMT

ಮಂಗಳೂರು, ಫೆ.7: ಮಂಜನಾಡಿ ಜುಮಾ ಮಸೀದಿ ಸಮೀಪದ ಹಝ್ರತ್ ಅಸೈಯದ್ ಇಸ್ಮಾಯೀಲುಲ್ ಬುಖಾರಿ (ಖ.ಸಿ.) ಅವರ ಹೆಸರಿನಲ್ಲಿ ಪ್ರತೀ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ 28ನೆ ಊರುಸ್ ಸಮಾರಂಭವು ಫೆ.9ರಿಂದ 18ರವರೆಗೆ ಮಸೀದಿಯ ಗೌರವಾಧ್ಯಕ್ಷ ಅಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್‌ರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಂಜನಾಡಿಯ ಬುಸ್ತಾನುಲ್ ಉಲೂಂ ದರ್ಶ್ ಮತ್ತು ಜುಮಾ ಮಸ್ಜಿದ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪಾಡಿ ತಿಳಿಸಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜನಾಡಿ ಮಸೀದಿಯ ಪ್ರಾಂಗಣದಲ್ಲಿ ಅಸೈಯದ್ ಜಾಫರ್ ಸಾದಿಕ್ ತಂಙಳ್ ಕುಂಬೋಳ್ ಧ್ವ್ವಜಾರೋಹಣ ಮಾಡುವ ಮೂಲಕ ಊರುಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಫೆ.9ರಂದು ಮುದರ್ರಿಸ್ ಅಹ್ಮದ್ ಬಾಖವಿಯ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಲಿದೆ. ಉಳ್ಳಾಲ ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶೈಖುನಾ ಅಸೈಯದ್ ಆಟಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ.9ರಿಂದ 18ರವರೆಗೆ ಅಲ್‌ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಅಲ್‌ಹಾಜ್ ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಕೆ.ಎಂ. ಅಬ್ದುಲ್ ಮಜಿದ್ ಬಾಖವಿ ಕೊಡುವಳ್ಳಿ, ಲುಕುಮಾನುಲ್ ಹಕೀಂ ಸಖಾಫಿ, ಶೈಖುನಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಮತ್ತಿತರ ಪ್ರಸಿದ್ಧ ಭಾಷಣಕಾರರು ಪ್ರತಿದಿನ ರಾತ್ರಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.

  ಕಾರ್ಯಕ್ರಮದಲ್ಲಿ ಅಸೈಯದ್ ಕೆ.ಎಸ್. ಅಲಿ ತಂಙಳ್ ಕುಂಬೋಳ್, ಅಸೈಯದ್ ಅಥಾವುಲ್ಲ ತಂಙಳ್, ಅಸೈಯದ್ ಮುತ್ತುಕೋಯ ಜಿಪ್ರಿ ತಂಙಳ್, ಅಲ್‌ಹಾಜ್ ಆಲಿಕುಂಞಿ ಉಸ್ತಾದ್, ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಖಾಝಿ ಮತ್ತಿತರ ಪಂಡಿತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಫೆ.18ರ ಉರೂಸ್ ಸಮಾರೋಪ ಸಮಾರಂಭದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಶೈಖುನಾ ಅಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಆಗಮಿಸಲಿದ್ದಾರೆ. ಅಂದು ಸಂಜೆ 4ರಿಂದ 7 ಗಂಟೆಯವರೆಗೆ ಸ್ತ್ರೀಯರಿಗೆ ಹಾಗೂ ರಾತ್ರಿ 12 ಗಂಟೆಯಿಂದ ಸುಬಹಿ ನಮಾಝ್‌ವರೆಗೆ ಪುರುಷರಿಗೆ ಅನ್ನದಾನ ಮಾಡಲಾಗುವುದು ಎಂದರು.

 ಅಂದು ಸಂಜೆ 6 ಗಂಟೆಗೆ ಸರ್ವ ಧರ್ಮ ಸೌಹಾರ್ದ ಸಮಾರಂಭ ನಡೆಯಲಿದ್ದು, ಅಹ್ಮದ್ ಬಾಖವಿ, ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್, ಸಂಸದ ನಳಿನ್‌ಕುಮಾರ್ ಕಟೀಲ್, ಯೆನೆಪೊಯ ಅಬ್ದುಲ್ಲ ಕುಂಞಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಸ್ತಾನುಲ್ ಉಲೂಂ ದರ್ಸ್ ಮತ್ತು ಜುಮಾ ಮಸ್ಜಿದ್‌ನ ಅಧ್ಯಕ್ಷ ಅಬ್ದುಲ್ ಅಝೀಝ್ (ಮೈಸೂರು ಬಾವ), ಉಪಾಧ್ಯಕ್ಷ ಇಸ್ಮಾಯೀಲ್ ದೊಡ್ಡಮನೆ, ಕೋಶಾಧಿಕಾರಿ ಕುಂಞಿ ಬಾವ ಹಾಜಿ ಕಲ್ಕಟ್ಟ, ಮಾಜಿ ಅಧ್ಯಕ್ಷ ಆಲಿಕುಂಞಿ ಬಾವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News