ಶಿರಿಯಾರ ಗ್ರಾಪಂ ಬರ್ಖಾಸ್ತಿಗೆ ಜಿಪಂ ಸರ್ವಾನುಮತದ ನಿರ್ಣಯ
ಮಣಿಪಾಲ, ಫೆ.7: ದಲಿತ ಮಹಿಳೆಯೊಬ್ಬರನ್ನು ಅಧ್ಯಕ್ಷೆಯಾಗಿ ಹೊಂದಿರುವ ಉಡುಪಿ ತಾಲೂಕಿನ ಶಿರಿಯಾರ ಗ್ರಾಪಂನ್ನು ಬರ್ಖಾಸ್ತುಗೊಳಿಸುವ ಸರ್ವಾನುಮತದ ನಿರ್ಣಯವನ್ನು ಉಡುಪಿ ಜಿಪಂ ಇಂದು ದಿನಕರಬಾಬು ಅಧ್ಯಕ್ಷತೆಯಲ್ಲಿ ನಡೆದ ಐದನೇ ಸಾಮಾನ್ಯ ಸಭೆಯಲ್ಲಿ ಕೈಗೊಂಡಿತು.
ಶಿರಿಯಾರ ಗ್ರಾಪಂನಲ್ಲಿ ಸಾಮಾನ್ಯ ಸಭೆಗಳು ನಿಗದಿಯಾದಂತೆ ನಡೆಯದೇ, ಗ್ರಾಪಂನ ಎಲ್ಲಾ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಪಂನ್ನು ಬರ್ಖಾಸ್ತು ಮಾಡುವಂತೆ ಉಡುಪಿ ತಾಪಂ ಸರ್ವಾನು ಮತದ ಪ್ರಸ್ತಾವನೆಯ ಕುರಿತು ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಿ ಪಂಚಾಯತ್‌ರಾಜ್ ಅಧಿನಿಯಮದಂತೆ ಗ್ರಾಪಂಗೆ ಕಾಲಾವಕಾಶ ನಿೀಡಿ ನೋಟೀಸು ಜಾರಿ ಗೊಳಿಸಲಾಗಿತ್ತು.
ಶಿರಿಯಾರ ಗ್ರಾಪಂನಲ್ಲಿ ಸಾಮಾನ್ಯ ಸೆಗಳುನಿಗದಿಯಾದಂತೆ ನಡೆಯದೇ, ಗ್ರಾಪಂನ ಎಲ್ಲಾಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಪಂನ್ನು ಬರ್ಖಾಸ್ತುಮಾಡುವಂತೆ ಉಡುಪಿ ತಾಪಂ ಸರ್ವಾನುಮತದ ಪ್ರಸ್ತಾವನೆಯ ಕುರಿತು ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಜಿಪಂ ಸಾಮಾನ್ಯಸೆಯಲ್ಲಿ ಸವಿಸ್ತಾರವಾಗಿ ಚರ್ಚಿಸಿ ಪಂಚಾಯತ್‌ರಾಜ್ ಅಧಿನಿಯಮದಂತೆ ಗ್ರಾಪಂಗೆ ಕಾಲಾವಕಾಶ ನೀಡಿ ನೋಟೀಸು ಜಾರಿ ಗೊಳಿಸಲಾಗಿತ್ತು. ಇಂದು ವಿಷಯ ಪ್ರಸ್ತಾಪಿಸಿದ ಪ್ರತಾಪ್ ಹೆಗ್ಡೆ ಮಾರಾಳಿ ಅವರು, ಗ್ರಾಪಂನ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಸಮನ್ವಯದ ಕೊರತೆಯಿಂದ ಗ್ರಾಮದ ಜನರು ತೀವ್ರ ತೊಂದರೆ ಅನುಭವಿಸುತಿದ್ದು, ಗ್ರಾಪಂನ ಗ್ರಾಮಸಭೆ, ವಾರ್ಡ್ ಸಭೆಗಳು ನಿಗದಿಯಾದಂತೆ ನಡೆಯುತ್ತಿಲ್ಲ. ಇದರಿಂದ ಗ್ರಾಪಂನ ಎಲ್ಲಾ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಪಂನ್ನು ಬರ್ಖಾಸ್ತು ಗೊಳಿಸುವ ನಿರ್ಣಯ ತೆಗೆದುಕೊಳ್ಳುವಂತೆ ಸೂಚಿಸಿದರು.
ಕಾಂಗ್ರೆಸ್‌ನ ಹಿರಿಯ ಸದಸ್ಯ ಜನಾರ್ದನ ತೋನ್ಸೆ ಅವರು ಮಾತನಾಡಿ ತಮ್ಮ ಪಕ್ಷ ಈ ವಿಷಯದಲ್ಲಿ ತಟಸ್ಥವಾಗುಳಿಯುವುದು ಎಂದು ಹೇಳಿದರೂ, ಸಾಮಾನ್ಯ ಸಭೆ ಕೊನೆಗೆ ಸರ್ವಾನುಮತದ ನಿರ್ಣಯ ಕೈಗೊಂಡಿತು. ಗ್ರಾಪಂ ರಚನೆಯ ಉದ್ದೇಶವೇ ಇಲ್ಲಿ ವಿಫಲಗೊಂಡಿರುವುದರಿಂದ ಈ ನಿರ್ಧಾರಕ್ಕೆ ಬರಲಾಯಿತು ಎಂದು ಅಧ್ಯ್ಷ ದಿನಕರಬಾಬು ಸ್ಪಷ್ಟಪಡಿಸಿದರು.
ಶಿರಿಯಾರ ಗ್ರಾಪಂನಲ್ಲಿ ಸದಸ್ಯರ ನಡುವೆ ಹೊಂದಾಣಿಕೆ ಹಾಗೂ ಸಮನ್ವಯದ ಸಮಸ್ಯೆ ಇರುವುದರಿಂದ ಗ್ರಾಪಂಗೆ ನಿಗದಿತ ಸಾರ್ವಜನಿಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಪಂನಿಂದ ದೊರೆಯಬೇಕಾದ ಯಾವುದೇ ಸೌಲಭ್ಯ ಗ್ರಾಮಸ್ಥರಿಗೆ ಸಿಗುತ್ತಿಲ್ಲ. ಆದುದರಿಂದ ಗ್ರಾಪಂನ ಉದ್ದೇಶಕ್ಕೆ ತಕ್ಕಂತೆ ಯಾವುದೇ ಕಾರ್ಯ ನಡೆಯದಿರುವ ಹಿನ್ನೆಲೆಯಲ್ಲಿ ಶಿರಿಯಾರ ಗ್ರಾಪಂನ ಬರ್ಖಾಸ್ತಿಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ದಲಿತ ಮಹಿಳೆಯೊಬ್ಬರನ್ನು ಅಧ್ಯಕ್ಷೆಯಾಗಿ ಹೊಂದಿರುವ ಶಿರಿಯಾರ ಗ್ರಾಪಂನಲ್ಲಿ ಆರಂಭದಿಂದಲೂ ಅಧ್ಯಕ್ಷೆ ಹಾಗೂ ಸದಸ್ಯರ ನಡುವಿನ ಭಿನ್ನಾಭಿಪ್ರಾಯದಿಂದ ಗ್ರಾಮಸಭೆಗಳು ನಡೆಯದೇ ಇಡೀ ಗ್ರಾಪಂನ ಅಭಿವೃದ್ಧಿ ಚಟುವಟಿಕೆಗಳೇ ಸ್ಥಗಿತಗೊಂಡಿತ್ತು. ಗ್ರಾಪಂನ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ ತಾಪಂ ಸಭೆಯಲ್ಲಿ ಇಡೀ ಶಿರಿಯಾರ ಗ್ರಾಪಂನ್ನೇ ಬರ್ಖಾಸ್ತು ಗೊಳಿಸುವಂತೆ ಜಿಪಂಗೆ ಶಿಫಾರಸ್ಸು ಮಾಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು.
ಶಿಕ್ಷಣ, ಆರೋಗ್ಯಕ್ಕೆ ನಿಗಾ ವಹಿಸಿ: ಜಿಲ್ಲೆಯ ಹಲವೆಡೆಗಳಲ್ಲಿ ಆರೋಗ್ಯ ಇಲಾಖೆ ಡಾಕ್ಟರ್‌ಗಳು ಮತ್ತು ಎಎನ್‌ಎಂಗಳ ಕಾರ್ಯವೈಖರಿ ಬಗ್ಗೆ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವಲಯದಲ್ಲಿ ಕೆಲವು ಜಿಪಂ ಸದಸ್ಯರ ವ್ಯಾಪ್ತಿ ಯಲ್ಲಿ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಅತೃಪ್ತಿಕರವಾಗಿ ಕರ್ತವ್ಯ ನಿರ್ವಹಿ ಸುತ್ತಿರುವ ಬಗ್ಗೆ ಸದಸ್ಯರು ಅಧ್ಯಕ್ಷರ ಗಮನಸೆಳೆದರು.
ಸಿದ್ದಾಪುರದಲ್ಲಿ ಆರೋಗ್ಯ ಇಲಾಖೆಗೆ ವಾಹನ ಇಲ್ಲ, ಈದು ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲ, ಸಬ್ ಸೆಂಟರ್‌ಗೂ ಹೋಗ್ತಾ ಇಲ್ಲ ಎಂದು ದಿವ್ಯಶ್ರೀ ಅಮೀನ್ ಮಿಯಾರು ಆಕ್ಷೇಪಿಸಿದರು. ಗೋಪಾಡಿಗೆ ಎಎನ್‌ಎಂ ಇಲ್ಲ, ಬೀಜಾಡಿ ಜನರಿಗೆ ಉಪಕೇಂದ್ರ ಅಗತ್ಯವಿದೆ. ಹೆಬ್ರಿ ಆರೋಗ್ಯ ಕೇಂದ್ರವನ್ನೇ ಮುಚ್ಚಿ, ಇಲ್ಲಿನ ಡಾಕ್ಟರ್ ಸೇವೆ ನೀಡದ ಬಗ್ಗೆ ಜ್ಯೋತಿ ಹರೀಶ್ ಅಸಮಾಧಾನ ವ್ಯಕ್ತಪಡಿಸಿದರು. ಶಿಲ್ಪಾ ಸುವರ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಗಳನ್ನು ಗಂಭೀರವಾಗಿ ಪರಿಗಣಿಸುವಂತೆ ತಾಕೀತು ಮಾಡಿದರು.
ಸುರೇಶ್ ಬಟ್ವಾಡಿ ಶೀರೂರು ಗ್ರಾಪಂ ವ್ಯಾಪ್ತಿಯಲ್ಲಿ ಬೋಟ್ ನಿರ್ಮಾಣ ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಮಯ ಮಿತಿಯೊಳಗೆ ಬೋಟ್ ಕಾಮಗಾರಿ ಮುಗಿಸಲು ೂಚಿಸುವಂತೆ ಆಗ್ರಹಿಸಿದರು.
ಸುರೇಶ್ ಬಟ್ವಾಡಿ ಶೀರೂರು ಗ್ರಾಪಂ ವ್ಯಾಪ್ತಿಯಲ್ಲಿ ಬೋಟ್ ನಿರ್ಮಾಣ ಅಕ್ರಮವಾಗಿ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಮಯ ಮಿತಿಯೊಳಗೆ ಬೋಟ್ ಕಾಮಗಾರಿ ಮುಗಿಸಲು ಸೂಚಿಸುವಂತೆ ಆಗ್ರಹಿಸಿದರು. ಬಸ್‌ಗಳ ಸಮಸ್ಯೆ: ಬಸ್ ರೂಟ್ ಬಗ್ಗೆ ಸದಸ್ಯರಿಂದ ಇಂದೂ ಆಕ್ಷೇಪಗಳು ವ್ಯಕ್ತವಾದವು. ಮಕ್ಕಳಿಗೆ, ಕಾರ್ಮಿಕರಿಗೆ ಬಸ್‌ನ್ನು ರದ್ದು ಪಡಿಸುವುದರಿಂದ ಬಹಳಷ್ಟು ತೊಂದರೆಯಾಗಿದೆ ಎಂದು ಜನಾರ್ದನ ತೋನ್ಸೆ ಹಾಗೂ ಸುಧಾಕರ ಶೆಟ್ಟಿ ಮೈರ್ಮಾಡಿ ಸಭೆಯ ಗಮನ ಸೆಳೆದರು. ಮಕ್ಕಳ ಸಮಸ್ಯೆಗೆ ಪರಿಹಾರ ಬೇಕೆಂದು ಒತ್ತಾಯಿಸಿದರು. ಈ ರೂಟ್‌ನಲ್ಲಿ ಸರಕಾರಿ ಬಸ್ ಓಡಿಸುವಂತೆ ಅವರು ಒತ್ತಾಯಿಸಿದರು.
ಮಕ್ಕಳ ಮತ್ತು ಮಹಿಳೆಯರ ಗ್ರಾಮಸಭೆ ಕಾಟಾಚಾರಕ್ಕೆ ಆಗುತ್ತಿದೆ ಎಂದು ಹಲವು ಸದಸ್ಯರು ಆಕ್ಷೇಪವೆತ್ತಿದರು. ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸುವಂತೆ ನಿರ್ಣಯ ಅಂಗೀಕರಿಸಿ ಎಂದು ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದರು.
ಮಕ್ಕಳ ಮತ್ತು ಮಹಿಳೆಯರ ಗ್ರಾಮಸೆಕಾಟಾಚಾರಕ್ಕೆಆಗುತ್ತಿದೆಎಂದುಹಲವುಸದಸ್ಯರುಆಕ್ಷೇಪವೆತ್ತಿದರು.ಅಂಗನವಾಡಿಕಾರ್ಯಕರ್ತೆಯರಸಮಸ್ಯೆಗೆಸ್ಪಂದಿಸುವಂತೆನಿರ್ಣಯಅಂಗೀಕರಿಸಿಎಂದುಉಪ್ಯಾಕ್ಷೆ ಶೀಲಾ ಕೆ ಶೆಟ್ಟಿ ಹೇಳಿದರು. ಗೌರವಧನ ಹೆಚ್ಚಳಕ್ಕೆ ಬೇಡಿಕೆ: ಎಲ್ಲ ಸದಸ್ಯರಿಗೆ ಗೌರವಧನ ಹೆಚ್ಚಳಕ್ಕೆ ಸರ್ವಾನುಮತದ ನಿರ್ಣಯ ಮಂಡಿಸಲು ತೋನ್ಸೆ ವಿನಂತಿಸಿದರು. ಮಕ್ಕಳಿಗೆ ಶಾಲಾ ಸಮವಸ್ತ್ರ ಹಾಗೂ ಕೆಲವು ಶಾಲೆಗಳಿಗೆ ಬೈಸಿಕಲ್ ಸಿಗದ ಬ್ಗೆ ಸದಸ್ಯರು ಗಮನಸೆಳೆದರು.