ಮಂಗಳೂರು: ಬೈಕ್ ಢಿಕ್ಕಿ ಹೊಡೆದು ಚೂರಿಯಿಂದ ಹಲ್ಲೆ
Update: 2017-02-07 21:55 IST
ಮಂಗಳೂರು, ಫೆ.7: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಢಿಕ್ಕಿ ಹೊಡೆಸಿ ಬಳಿಕ ಚೂರಿಯಿಂದ ಹಲ್ಲೆ ಮಾಡಿದ ಘಟನೆ ಸೋಮವಾರ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜನಾರ್ದನ್ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಬಿಜು ಎಂಬಾತ ಪಲ್ಸರ್ ಬೈಕ್‌ನಿಂದ ಹಿಂದಿನಿಂದ ಬಂದು ಜನಾರ್ದನ್‌ಗೆ ಢಿಕ್ಕಿ ಹೊಡೆದಿದ್ದು, ಬಳಿಕ ಆರೋಪಿಗೆ ಹೆಲ್ಮೆಟ್‌ನಿಂದ ಹೊಡೆದು ಬೆದರಿಕೆ ಹಾಕಿದ್ದಾರೆ.
ಸ್ವಲ್ಪ ಸಮಯದ ಬಳಿಕ ಆರೋಪಿ ಬಿಜು ಮತ್ತು ಆತನ ಮಗ ವಿಶಾಕ್ ಮತ್ತೆ ಬೈಕ್‌ನಲ್ಲಿ ಬಂದು ಜನಾರ್ದನ್‌ರನ್ನು ದೂಡಿ ಹಾಕಿ ಕಾಲಿನಿಂದ ತುಳಿದಿದ್ದಾರೆ. ಬಳಿಕ ಆರೋಪಿ ವಿಶಾಕ್ ಸೊಂಟದ ಹಿಂಬದಿಗೆ ಚೂರಿಯಿಂದ ತಿವಿದು ತೀವ್ರತರದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.