ಪುರಂದರ, ಸಂಗೀತ ತ್ರಿಮೂರ್ತಿ ಉತ್ಸವಕ್ಕೆ ಚಾಲನೆ
ಉಡುಪಿ, ಫೆ.3: ಉಡುಪಿಯ ರಾಗಧನ ಸಂಸ್ಥೆ ಆಯೋಜಿಸಿರುವ ಶ್ರೀಪುರಂದರದಾಸ ಮತ್ತು ತ್ರಿಮೂರ್ತಿ ಉತ್ಸವ ಶುಕ್ರವಾರೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರಮಂಟಪದಲ್ಲಿ ಉದ್ಘಾಟನೆಗೊಂಡಿತು.
ಮಣಿಪಾಲ ವಿವಿಯ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಸಂಗೀತೋತ್ಸವವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲೆ ಮನುಷ್ಯನ ಬದುಕಿಗೆ ವಿಭಿನ್ನ ಆಯಾಮವನ್ನು ನೀಡುತ್ತದೆ. ಕಲಾಸಕ್ತಿ ಇಲ್ಲದ ಬದುಕು ಶುಷ್ಕವಾಗಿರುತ್ತದೆ ಎಂದರು.
ನೃತ್ಯ, ನಾಟಕ, ಸಾಹಿತ್ಯ ಹೀಗೆ ಅನೇಕ ಪ್ರಕಾರಗಳಿವೆಯಾದರೂ ಸಂಗೀತ ಎಲ್ಲಕ್ಕಿಂತಲೂ ಭಿನ್ನಕಲೆ. ಯಾಕೆಏಂದರೆ ಇದರಲ್ಲೊಂದು ಅಮೂರ್ತತೆಯಿದೆ. ಸಂಗೀತ ರಸಗ್ರಹಣ ನಮ್ಮಲ್ಲಿ ಹೆಚ್ಚಬೇಕು. ಸಂಗೀತ ಸಂಸ್ಥೆಗಳ ಮೂಲಕ ರಸಗ್ರಹಣ ಶಿಬಿರಗಳ ಆಯೋಜನೆಯಾಗಬೇಕು. ಸಂಗೀತಕ್ಕೆ ಉತ್ತಮ ಕೇಳುಗರನ್ನು ಸಿದ್ಧಮಾಡಬೇಕು ಎಂದರು.
ಸಮಾರಂಭದಲ್ಲಿ ಪ್ರೊ.ಅರವಿಂದ ಹೆಬ್ಬಾರ್ ಇವರ ‘ವಿಮರ್ಶೆಯ ಹರಿತ’ ಪುಸ್ತಕವನ್ನು ಅಧ್ಯಕ್ಷ ಎ.ಈಶ್ವರಯ್ಯ ಬಿಡುಗಡೆಗೊಳಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುಸುಮಾ ಕಾಮತ್ ಉಪಸ್ಥಿತದ್ದರು.
ರಾಗಧನದ ಕಾರ್ಯದರ್ಶಿ ಉಮಾಶಂಕರಿ ಸ್ವಾಗತಿಸಿದರು.