×
Ad

ಶಿರಿಯಾರ: ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ವಿತರಣೆ

Update: 2017-02-07 22:26 IST

ಬ್ರಹ್ಮಾವರ, ಜ.31: ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಯೋಜನೆ ಗಳ ಕುರಿತ ಮಾಹಿತಿ ಕೊರತೆಯಿಂದ ಅರ್ಹ ಲಾನುಭವಿಗಳು ಯೋಜನೆ ಗಳಿಂದ ವಂಚಿತರಾಗುತ್ತಿದ್ದಾರೆ. ಆದುದರಿಂದ ಸಮಾದ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದೆ ಎಂದು ಉಡುಪಿ ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಹೇಳಿದ್ದಾರೆ.

ಸ್ನೇಹ ಕಲಾರಂಗ ಯುವ ವೇದಿಕೆ ಕೊಳ್ಕೆಬೈಲು ಶಿರಿಯಾರ ಇದರ ಆರನೇ ವರ್ಷದ ವಾರ್ಷೀಕೋತ್ಸವ ಸಮಾರಂಭದ ಅಂಗವಾಗಿ ಇತ್ತೀಚೆಗೆ ಕೊಳ್ಕೆ ಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಸನ್ಮಾನ, ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

   ಕಾರ್ಯಕ್ರಮವನ್ನು ಕೊಳ್ಕೆಬೈಲು ಶ್ರೀಬ್ರಹ್ಮಬಂಟ ಶಿವರಾಯ ಗರಡಿಯ ಮೊಕ್ತೇಸರ ರವೀಂದ್ರನಾಥ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ರಾಘವೇಂದ್ರ ಹೆಸ್ಕತ್ತೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯೆ ನಿರ್ಮಲ ಶೆಟ್ಟಿ, ಸಾಬರಕಟ್ಟೆ ಶ್ರೀರಂಗ ಯುವ ಸಂಪದ ಗೌರವಾಧ್ಯಕ್ಷ ರಾಘವೇಂದ್ರ ಆಚಾರ್ಯ, ಜನನಿ ಯುವ ಕನ್ನಡ ಸಂಘದ ಗೌರವಾಧ್ಯಕ್ಷ ರವೀಂದ್ರನಾಥ ಕಿಣಿ, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಪ್ರದೀಪ್ ಬಲ್ಲಾಳ್, ಅಶೋಕ ಪ್ರಭು, ಸುಬ್ರಹ್ಮಣ್ಯ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕ ಸುರೇಶ್ ಭಂಡಾರಿ ಉಪಸ್ಥಿತರಿದ್ಧರು.

 ನಿವೃತ್ತ ಸ್ಯನಿಕರಾದ ವಾಸುದೇವ ಕೆ, ಸುರೇಶ ಶೆಟ್ಟಿ, ಉದಯ ಮರಕಾಲ ಅವರನ್ನು ಗೌರವಿಸಲಾಯಿತು. ಬಳಿಕ ಉರಗತಜ್ಞ ಗುರುರಾಜ್ ಸನಿಲ್ ಅವರಿಂದ ಹಾವುಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮ, ಜಾದು ಗಾರ ಸುದನ್ವ ಮುದ್ರಾಡಿ ಮತ್ತು ಬಳಗದವರಿಂದ ಜಾದೂ ಮಾಯಲೋಕ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News