×
Ad

ಪಿಎಫ್‌ಐ ಜಿಲ್ಲಾಧ್ಯಕ್ಷರಾಗಿ ನಿಸಾರ್

Update: 2017-02-07 22:27 IST

ಉಡುಪಿ, ಜ.27: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾಗಿ ನಿಸಾರ್ ಅಹ್ಮದ್ ಬ್ರಹ್ಮಾವರ ಹಾಗೂ ಪ್ರಧಾನ ಕಾರ್ಯ ದರ್ಶಿಯಾಗಿ ಫಯಾಝ್ ಮಲ್ಪೆಆಯ್ಕೆಯಾಗಿದ್ದಾರೆ.

ಬೆಳಪುವಿನ ಮಿನರಾ ಮಸೀದಿಯ ಸಭಾಂಗಣದಲ್ಲಿ ಜ.26ರಂದು ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲೆಯ 2016ನೆ ಸಾಲಿನ ಕಾರ್ಯ ಚಟುವಟಿಕೆಗಳ ವರದಿಯನ್ನು ವಾಚಿಸಲಾಯಿತು. ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಇಲಿಯಾಸ್ ತುಂಬೆ, ನಿರ್ಗಮನ ಅಧ್ಯಕ್ಷ ಫಝಿಲ್ ಆದಿಉಡುಪಿ, ಕಾರ್ಯದರ್ಶಿ ಅಲಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News