×
Ad

ಉಡುಪಿ: ದಕ್ಷಿಣ ಕೊರಿಯಾ ವಿದ್ಯಾರ್ಥಿಗಳಿಗೆ ಪಂಚಕರ್ಮ ಕಾರ್ಯಾಗಾರ

Update: 2017-02-07 22:42 IST

ಉಡುಪಿ, ಫೆ.7: ದಕ್ಷಿಣ ಕೊರಿಯಾ ವೊಂಕ್‌ವಾಂಗ್ ಡಿಜಿಟಲ್ ವಿಶ್ವ ವಿದ್ಯಾಲಯದ ಯೋಗ ಮತ್ತು ಧ್ಯಾನ ವಿಭಾಗದ ವಿದ್ಯಾರ್ಥಿಗಳು ಎರಡು ದಿನಗಳ ಪಂಚಕರ್ಮ ಚಿಕಿತ್ಸೆಯ ಅಧ್ಯಯನಕ್ಕಾಗಿ ಇತ್ತೀಚೆಗೆ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಗೆ ಭೇಟಿ ನೀಡಿದರು.

ಡಾ. ರಾಜಲಕ್ಷ್ಮಿ ಎಂ.ಜಿ., ಡಾ.ಪದ್ಮಕಿರಣ್ ಹಾಗೂ ಡಾ.ಪೂಜಾ ಬಿ.ಎ. ವಿವಿಧ ಪಂಚಕರ್ಮ ಚಿಕಿತ್ಸೆಯ ಉಪಯೋಗದ ಬಗ್ಗೆ ದಕ್ಷಿಣ ಕೊರಿಯಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಕಾಂತ್ ಯು. ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಆಯುರ್ವೇದ ಉಪಯುಕ್ತತೆ ಹಾಗೂ ಅವಶ್ಯಕತೆ ಬಗ್ಗೆ ತಿಳಿಸಿದರು.

ಡಾ.ಅಶೋಕ್ ಕುಮಾರ್ ಬಿ.ಎನ್. ಆಸ್ಪತ್ರೆ, ಕಾಲೇಜು, ಪಾರ್ಮಸಿ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಡಾ.ನಿರಂಜನ ರಾವ್ ಹಾಗೂ ಡಾ. ದೀಪಕ್ ಎಸ್.ಎಂ. ಾರ್ಯಕ್ರಮವನ್ನು ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News