ಸಿರಾಜುಲ್ ಹುದಾ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಅಶ್ರಫ್ ಮದನಿ ಚೌಕ ಆಯ್ಕೆ
ಕೊಣಾಜೆ, ಫೆ. 7: ಸೇರಾಜೆ ಉಸ್ತಾದ್ ಎಂದು ಕರೆಯಲ್ಪಡುವ ಎಸ್.ಎ ಅಬ್ದುಲ್ ಹಮೀದ್ ಲತೀಫಿ ಸೇರಾಜೆ ಉಸ್ತಾದರ ಮನೆಯಲ್ಲಿ ಶಿಷ್ಯಂದಿರ ಸಿರಾಜುಲ್ ಹುದಾ ಹಳೆ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಜಲಾಲಿಯ್ಯ ರಾತೀಬ್ ಹಾಗೂ ಅಗಲಿದ ಸುನ್ನೀ ನೇತಾರರ ಅನುಸ್ಮರಣೆ ಮತ್ತು ಸಂಘಟನೆಯ ಮಹಾಸಭೆಯು ಸಿ.ಎಚ್ ಅಶ್-ಅರಿಯ್ಯಾ ಮುಹಮ್ಮದಾಲಿ ಸಖಾಫಿ ಮತ್ತು ಸಿ.ಎಮ್ ಎಣ್ಮೂರ್ ಲತೀಫಿರವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ನೂತನ ಅಧ್ಯಕ್ಷರಾಗಿ ಅಶ್ರಫ್ ಮದನಿ ಚೌಕ, ಉಪಾಧ್ಯಕ್ಷರಾಗಿ ಎಮ್.ಐ ಅಶ್ರಫ್ ಸಅದಿ ಮೊಂಟೆಪದವು, ಹುಸೈನ್ ಕೆದಿಲ, ಶರೀಫ್ ಬದ್ರಿ ಸುಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಂ ಹನೀಫಿ ನಿಡಿಗಲ್, ಕಾರ್ಯದರ್ಶಿಯಾಗಿ ಆದಂ ಮುಸ್ಲಿಯಾರ್ ಕೆದಿಲ, ಇಕ್ಬಾಲ್ ಮುಸ್ಲಿಯಾರ್ ಪಜೀರ್, ಸಂಘಟನಾ ಕಾರ್ಯದರ್ಶಿಯಾಗಿ ದಾವೂದ್ ಝುಹುರಿ ಸುರಿಬೈಲ್, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ಬಾಸ್ ಮದನಿ ಕಂಡಿಗ, ಕೋಶಾಧಿಕಾರಿಯಾಗಿ ಮಜೀದ್ ಹನೀಫಿ ಸುರಿಬೈಲ್ ಮತ್ತು ಎಲ್ಲಾ ಶಿಷ್ಯಂದಿರನ್ನು ಸದಸ್ಯರಾಗಿ ಆಯ್ಕೆ ನಡಲಾಯಿತು. ಈ ಸಭೆಯನ್ನು ರಶೀದ್ ಹನೀಫಿ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಹನೀಫಿ ನಿಡಿಗಲ್ ವಂದಿಸಿದರು.